ಸುರಕ್ಷಿವಾಗಿ ತವರು ಮುಟ್ಟಿದ ಶ್ರೀಲಂಕಾ ತಂಡ
ಕೊಲಂಬೊ,
ಮಾ. 4 : ಪ್ರಾಣಾಪಾಯದಿಂದ ಪಾರಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡ ಬುಧವಾರ ಬೆಳಗ್ಗೆ ಶ್ರೀಲಂಕಾ ಏರ್ ವೇಸ್ (ಎ 320) ಮೂಲಕ ಸುರಕ್ಷಿತವಾಗಿ ಕೊಲಂಬೊದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯತು. ತೀವ್ರ ಆತಂಕಕ್ಕೆ ಒಳಗಾಗಿರುವ ಕ್ರಿಕೆಟಿಗರ ಸ್ವಾಗತಕ್ಕೆ ಸಾವಿರಾರು ಮಂದಿ ಕ್ರಿಕೆಟ್ ಅಭಿಮಾನಿಗಳು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಆಟಗಾರರ ಕುಟುಂಬ ವರ್ಗದವರೂ ಉಪಸ್ಥಿತರಿದ್ದರು. id="toptextpromo">ಸ್ಟಾರ್
ಆಟಗಾರ ತಿಲಾನ್ ಸಮರವೀರ ಹಾಗೂ ತರಂಗ ಹೆಚ್ಚು ಗಾಯಗೊಂಡು ಪಾಕಿಸ್ತಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲಿ ಗುಣಮುಖರಾಗಿ ತವರಿಗೆ ಮರಳಲಿದ್ದಾರೆ. ಅಗತ್ಯ ಬಿದ್ದಲ್ಲಿ ಕೊಲಂಬೊ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು ಎಂದು ಶ್ರೀಲಂಕಾ ಕ್ರೀಡಾ ಸಚಿವ ಗಮಿನಿ ಲೊಕಾಗೆ ಹೇಳಿದ್ದಾರೆ. ಪಾಕ್ ಮೇಲೆ ನಡೆದಿರುವ ಗುಂಡಿನ ದಾಳಿ ಕೃತ್ಯದಲ್ಲಿ ಎಲ್ ಟಿಟಿಇ ಕೈವಾಡ ಇರುವ ಸಾಧ್ಯತೆ ಇರಬಹುದು ಎಂದು ಶ್ರೀಲಂಕಾ ಅನುಮಾನ ವ್ಯಕ್ತಪಡಿಸಿರುವ ವರದಿಯನ್ನು ಝೀ ನ್ಯೂಸ್ ತನ್ನ ವೆಬ್ ಸೈಟ್ ನಲ್ಲಿ ವರದಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)
ನನಗೆ












Click it and Unblock the Notifications