ಪುರೋಹಿತ್ ಗೆ ಪುಣೆ ನ್ಯಾಯಾಲಯ ಜಾಮೀನು
ಪುಣೆ,
ಫೆ. 28 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಸೇನಾಧಿಕಾರಿ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಅವರಿಗೆ ಪುಣೆಯ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ನಕಲಿ ದಾಖಲೆ ಪತ್ರ ನೀಡಿ ಶಸ್ತ್ರಾಸ್ತ್ರ ಖರೀದಿಸಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 15 ಸಾವಿರ ರುಪಾಯಿ ಭದ್ರತಾ ಠೇವಣಿ ಇರಿಸಿಕೊಂಡು ಜಾಮೀನು ಮಂಜೂರು ಮಾಡಿದೆ. 90 ದಿನಗಳೊಳಗೆ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಪೊಲೀಸರು ವಿಫಲವಾಗಿದ್ದರಿಂದ ಜಾಮೀನು ದೊರೆಯಲು ಕಾರಣವಾಗಿದೆ. id="toptextpromo">ಪುಣೆಯ
ಸ್ನೇಹಿತನೊಬ್ಬನ ನಕಲಿ ಹೆಸರಿನಲ್ಲಿ ಪುರೋಹಿತ್ ಶಸ್ತ್ರಾಸ್ತ್ರ ಖರೀದಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಪುರೋಹಿತ್ ಅವರು ಸದ್ಯ ಜೈಲಿನಲ್ಲಿದ್ದು, ಮಾಲೇಗಾಂವ್, ನಾಂದೇಡ ಹಾಗೂ ಜಲ್ನಾ ಸ್ಫೋಟಗಳ ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications