ಜೋಡಿ ಕೊಲೆ,ಮಹಂತಿನ ಮಠದ ಸ್ವಾಮೀಜಿ ಸೆರೆ
ಚಿಕ್ಕಮಗಳೂರು, ಫೆ. 10 : ಒಡವೆ ಮತ್ತು ಹಣದ ಆಸೆಗಾಗಿ ಮಹಿಳೆಯರಿಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮೂಡಿಗೆರೆಯ ಮಹಂತಿನ ಮಠದ ಸ್ವಾಮೀಜಿ ಸೇರಿ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
13 ನೇ ಮಠಾಧೀಶರಾಗಿ 2006 ಮೇ 11 ರಂದು ಮೂಡಿಗೆರೆಯ ಮಹಂತಿನ ಮಠದ ಪೀಠ ಅಲಂಕರಿಸಿದ್ದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಬಂಧಿತ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಮಠದ ಭಕ್ತೆ ಶಿವಗಂಗಮ್ಮ ಅವರನ್ನು 2008 ಜೂನ್ 11 ರಂದು ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಶವವನ್ನು ಬಿಸಾಡಿದ್ದರು. 2008 ಡಿಸೆಂಬರ್ 10 ರಂದು ಮೂಡಿಗೆರೆ ತಾಲ್ಲೂಕಿನ ಚಿನ್ನಿಗ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಾವತಿ ನಾಪತ್ತೆಯಾಗಿದ್ದರು. ಆ ಕೊಲೆಯನ್ನು ಸಹ ಸ್ವಾಮೀಜಿ ಹಾಗೂ ಅವರ ಸಹಚರರು ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದ್ದು, ಸೋಮವಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications