ಭಯೋತ್ಪಾದನೆ, ಯುಪಿಎ ವಿರುದ್ಧ ಮೋದಿ ಕಿಡಿ
ನಾಗ್ಪುರ್, ಫೆ. 8 : ಇತ್ತೀಚೆಗೆ ನಡೆದ ಮುಂಬೈ ದಾಳಿ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ದಾಳಿ ನಂತರ ಕಾಂಗ್ರೆಸ್ಸಿನ ಯುವನಾಯಕ ಎಂದು ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿ ವರ್ತನೆ ನಾಟಿಕೆಗೇಡಿನ ಸಂಗತಿ ಎಂದು ಬಿಜೆಪಿ ಪ್ರಭಾವಿ ನಾಯಕ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಲ್ಲಿ ನಡೆಯುತ್ತಿರುವ ಎರಡನೇ ದಿನದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಸಹಕರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಮುಂಬೈ ದಾಳಿ ನಂತರ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ದೇಶದ ನಾಗರಿಕರಲ್ಲಿ ಅನೇಕ ಸಂಶಯಗಳನ್ನು ಮೂಡಿಸಿದೆ. ದಾಳಿ ನಡೆಸಿದ ಅಪರಾಧಿಗಳು ಬಗ್ಗೆ ಅಷ್ಟೂ ಸಾಕ್ಷ್ಯಾಧಾರಗಳು ಇದ್ದರೂ, ಸರ್ಕಾರ ಬರೀ ಬಾಯಿ ಮಾತಿನಲ್ಲೇ ಕಾಲ ಮಾಡಿತು ಎಂದು ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications