ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.26ರಂದು ವರ್ಷದ ಮೊದಲ ಸೂರ್ಯಗ್ರಹಣ

By Staff
|
Google Oneindia Kannada News

Solar eclipse on Jan 26
ಹೈದರಾಬಾದ್, ಜ.24: ಸೋಮವಾರ ಜನವರಿ 26ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯ ಗ್ರಹಣ ವಿಶ್ವದಾದ್ಯಂತ ಗೋಚರಿಸಲಿದೆ. ಆಫ್ರಿಕಾದ ದಕ್ಷಿಣ ಭಾಗಗಳು,ಅಂಟಾರ್ಟಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಸೂರ್ಯಗ್ರಹಣ ಆರಂಭವಾಗಲಿದೆ.

ಜ.26ರಂದು ಬೆಳಗ್ಗೆ 10.26 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.30 ಅಂತ್ಯವಾಗುತ್ತದೆ. ಹಲವಾರು ಹಂತಗಳಲ್ಲಿ ಗ್ರಹಣ ಸಂಭವಿಸಲಿದೆ. ಶೇ.92.9ರಷ್ಟು ಗ್ರಹಣ ಉಂಟಾಗಲಿದ್ದು 7.51 ನಿಮಿಷಗಳಷ್ಟು ಕಾಲ ಮುಂದುವರಿಯುತ್ತದೆ.

ಜ.26ರಂದು ಮಧ್ಯಾಹ್ನ 2.08 ಗಂಟೆಗೆ ಸೂರ್ಯಗ್ರಹಣವನ್ನು ಸ್ವೀಕರಿಸಲಿರುವ ಭಾರತದ ಮೊದಲ ನಗರ ಕನ್ಯಾಕುಮಾರಿಯಾಗಲಿದೆ. ನಂತರ ಪೋರ್ಟ್ ಬ್ಲೇರ್ ನಲ್ಲಿ ಸೂರ್ಯಗ್ರಹಣ ಮಧ್ಯಾಹ್ನ 2.17 ಗಂಟೆಗೆ ನೋಡಬಹುದು. ಸಂಜೆ 4.25ರವರೆಗೂ ಗ್ರಹಣ ದೇಶದ ವಿವಿಧ ಭಾಗಗಳಲ್ಲಿ ಗೋಚರಿಸಲಿದೆ. ದಕ್ಷಿಣ ಭಾರತ, ಪೂರ್ವ ಕರಾವಳಿ, ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಸೂರ್ಯಗ್ರಹಣವುಭಾಗಶಃ ಗೋಚರಿಸಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X