ಗೌಡರ ಮಾನ ಕಾಪಾಡಿದ ಸೊಸೆ ಅನಿತಾ

ಅನಿತಾ ಕುಮಾರಸ್ವಾಮಿ ಅವರು ಕಾಂಗ್ರೆಸ್ ನ ಕೆ ಎನ್ ರಾಜಣ್ಣ ಅವರ ವಿರುದ್ಧ 3,809 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಂತಿಮ ಸುತ್ತಿನವರೆಗೂ ಜೆಡಿಎಸ್-ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದವು. ಒಂದು ಹಂತದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚೆನ್ನಿಗಪ್ಪ ಪುತ್ರ ಜೆಡಿಎಸ್ ಅಭ್ಯರ್ಥಿ ಗೌರಿಶಂಕರ ವಿರುದ್ಧ ಕೇವಲ 560 ಮತಗಳ ಅತ್ಯಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ ಎನ್ ರಾಜಣ್ಣ, ಈ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನೂ ಹಾಕಲಾಗಿತ್ತು.
ಆದರೆ ಅನಿತಾ ಕುಮಾರಸ್ವಾಮಿ ಅವರು ಈ ಎಲ್ಲ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿ 3,809 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಹುರಿಯಾಳು ಮಾಜಿ ಸಚಿವ ಸಿ ಚೆನ್ನಿಗಪ್ಪ ಹೀನಾಯ ಸೋಲುನುಭವಿಸುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ತುರುವೇಕೆರೆಯಲ್ಲಿ ಜೆಡಿಎಸ್ ಜಯ
ತಾಂತ್ರಿಕ ದೋಷದಿಂದ ಮತಎಣಿಕೆಯಲ್ಲಿ ವಿಳಂಬವಾಗಿತ್ತು. ಇದಕ್ಕೂ ಮೊದಲು ಬಿಜೆಪಿ ಅಭ್ಯರ್ಥಿ ಎಂ ಡಿ ಲಕ್ಷ್ಮಿನಾರಾಯಣ ಗೆಲುವು ಸಾಧಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ನಂತರದಲ್ಲಿ ರಾಜ್ಯ ಚುನಾವಣೆ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದ್ದು, ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ ಅವರು 3,301 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಫಲಿತಾಂಶ ಘೋಷಣೆ ಮಾಡಬಾರದು ಎಂದು ಲಕ್ಷ್ಮಿನಾರಾಯಣ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಲಕ್ಷ್ಮಿನಾರಾಯಣ ದೂರನ್ನು ಮನ್ನಿಸದ ಆಯೋಗದ ಎಂ ಟಿ ಕೃಷ್ಣಪ್ಪ ಅವರ ಗೆಲುವು ಘೋಷಣೆ ಮಾಡಲು ಮುಂದಾಗುತ್ತಿದ್ದಂತೆಯೇ ಲಕ್ಷ್ಮಿನಾರಾಯಣ ಅವರಿಗೆ ಹೃದಯಾಘಾತವಾಯಿತು. ತಕ್ಷಣ ಅವರನ್ನು ತುಮಕೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ತುರುವೇಕೆರೆ ತಿರುಗುಮುರುಗಾದ ಫಲಿತಾಂಶ?
ಜಯದ ಹಾದಿಯಲ್ಲಿ ಅನಿತಾ ಕುಮಾರಸ್ವಾಮಿ
ಮಧುಗಿರಿ, ಮದ್ದೂರಿನ ಜೆಡಿಎಸ್ ಗೆಲುವಿನ ನಗೆ?












Click it and Unblock the Notifications