ಕುಮಾರಸ್ವಾಮಿಯಿಂದ ನೀತಿ ಸಂಹಿತಿ ಉಲ್ಲಂಘನೆ?

Did HDK violate election code of conduct?
ಬೆಂಗಳೂರು, ಡಿ. 27 : ಮತದಾನ ನಡೆಯುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಧುಗಿರಿಯಲ್ಲಿ ಕಾಣಿಸಿಕೊಂಡಿದ್ದಾರೆಂದು ಆರೋಪಿಸಿದ ಕಾಂಗ್ರೆಸ್ ನ ರಾಜಣ್ಣ ಮತ್ತು ಜೆಡಿಎಸ್ ನಾಯಕ ಜಮೀರ್ ಅಹ್ಮದ್ ನಡುವೆ ಮಾತಿನ ಚಕಮಕಿ ನಡೆದಿದೆ.

ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕುಮಾರಸ್ವಾಮಿ ಮತ್ತು ಜಮೀರ್ ಅಹ್ಮದ್ ಇದ್ದ ಕಾರನ್ನು ನೋಡಿದ ರಾಜಣ್ಣ ಅವರನ್ನು ಬೆನ್ನತ್ತಿ ಅಡ್ಡಗಟ್ಟಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದೀರೆಂದು ಆರೋಪಿಸಿ ಮಾತಿನ ಚಕಮಕಿಗಿಳಿದರು. ತಾವೇ ಅಭ್ಯರ್ಥಿಯಾಗಿರುವುದರಿಂದ ನೀವೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದೀರೆಂದು ಜಮೀರ್ ಪ್ರತ್ಯಾರೋಪ ಮಾಡಿದರು.

ಕಾರಿನಲ್ಲೇ ಕುಳಿತಿದ್ದ ಕುಮಾರಸ್ವಾಮಿ ಮಾತಿಗಿಳಿದಿಲ್ಲ. ಆದರೆ, ರಾಜಣ್ಣ ಮತ್ತು ಜಮೀರ್ ಅಹ್ಮದ್ ನಡುವಿನ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಕುಮಾರಸ್ವಾಮಿಯವರೂ ಕಾರಿನಿಂದ ಇಳಿದು ಮಧ್ಯ ಪ್ರವೇಶಿಸಲು ಯತ್ನಿಸಿದರು. ಆದರೆ ಪೊಲೀಸರು ಮೂವರನ್ನು ತಡೆದು ಹಿಂದೆ ಕಳಿಸಿದರು.

ಕೆಲ ಪೊಲೀಸ್ ಪೇದೆಗಳು ಕುಮಾರಸ್ವಾಮಿ ಜೊತೆಗೆ ಕಾಣಿಸಿಕೊಂಡಿದ್ದು ರಾಜಣ್ಣ ಉಗ್ರರೂಪ ತಾಳಲು ಪ್ರಚೋದನೆ ನೀಡಿದೆ. ಕುಮಾರಸ್ವಾಮಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ರಾಜಣ್ಣ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಇದಕ್ಕೂ ಮೊದಲು, ಕ್ಷೇತ್ರ ಪ್ರವೇಶಿಸಲೆತ್ನಿಸಿದ ಕುಮಾರಸ್ವಾಮಿಯನ್ನು ಪೊಲೀಸರು ತಡೆಯಲೆತ್ನಿಸಿದರೂ ಅದು ಸಾಧ್ಯವಾಗಿಲ್ಲ. ಸಾಧ್ಯವಿದ್ದರೆ ಬಂಧಿಸಿ ಎಂದು ಕುಮಾರಸ್ವಾಮಿ ವಾದಿಸಿದಾಗ ಪೊಲೀಸರು ಗತ್ಯಂತರವಿಲ್ಲದೆ ಅವರನ್ನು ಕ್ಷೇತ್ರ ಪ್ರವೇಶಿಸಲು ಬಿಟ್ಟಿದ್ದಾರೆ.

ಮಧುಗಿರಿಯಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ, ಬಿಜೆಪಿಯ ಸಿ ಚೆನ್ನಿಗಪ್ಪ, ಕಾಂಗ್ರೆಸ್ ನ ರಾಜಣ್ಣ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+