ಉಗ್ರರನ್ನು ಬಂಧಿಸಿ ಇಲ್ಲವೇ ಯುದ್ಧ ಎದುರಿಸಿ
ನವದೆಹಲಿ, ಡಿ. 24 : ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಪಾಕಿಸ್ತಾನ-ಅಪಘಾನಿಸ್ತಾನದ ಗಡಿಭಾಗದಲ್ಲಿರುವ ಉಗ್ರರ ನೆಲೆಯನ್ನು ನಾಶಪಡಿಸಬೇಕು ಹಾಗೂ ಭಾರತಕ್ಕೆ ಬೇಕಿರುವ ಉಗ್ರರನ್ನು ಕೂಡಲೇ ಹಸ್ತಾಂತರಿಸಬೇಕು ಎಂದು ಭಾರತ ತನ್ನ ಬಿಗಿಪಟ್ಟು ಮುಂದುವರೆಸಿದೆ. ಇದಕ್ಕೆ ಭಾರತ ಡಿಸೆಂಬರ್ 26ರ ವರೆಗೆ ಅಂತಿಮ ಗಡುವು ನೀಡಿದ್ದು, ತಪ್ಪಿದ್ದಲ್ಲಿ ಪಾಕ್ ವಿರುದ್ಧ ಯುದ್ಧ ಘೋಷಿಸುವ ಎಲ್ಲ ಸಾಧ್ಯತೆಗಳು ಇವೆ ಎಂದು ಜಾಗತಿಕ ರಾಜಕೀಯ ಗುಪ್ತಚರ ಸಂಸ್ಥೆ ಸ್ಟ್ರಾಟ್ ಫಾರ್ ಸ್ಪಷ್ಪಡಿಸಿದೆ.
ಅಮೆರಿಕದ ಮೂಲಕ ಭಾರತ ಪಾಕಿಸ್ತಾನಕ್ಕೆ ಸೂಕ್ತ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಕಳೆದ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದನೆಗೆ ಸಂಬಂಧಿಸಿದ ಉಗ್ರರನ್ನು ಬಂಧಿಸಬೇಕು, ಭಾರತಕ್ಕೆ ಬೇಕಿರುವ ಆರೋಪಿಗಳನ್ನು ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದೆ. ಈ ಕುರಿತು ಪಾಕಿಸ್ತಾನಕ್ಕೆ ಅನೇಕ ಸಲ ತಿಳಿಸಲಾಗಿದೆ. ಪರಿಸ್ಥಿತಿಯನ್ನು ಸಹ ಮನವರಿಕೆ ಮಾಡಿಕೊಡಲಾಗಿದೆ. ಆದರೂ ತನ್ನ ಹಠಮಾರಿ ಧೋರಣೆ ಮುಂದುವರೆಸಿರುವ ಪಾಕ್ ಡಿಸೆಂಬರ್ 26ರ ವರೆಗೆ ಅಂತಿಮ ಗಡುವು ನೀಡಲಾಗಿದೆ. ಭಾರತ ನೀಡಿರುವ ಕಾಲಾವಕಾಶದೊಳಗೆ ಉಗ್ರರ ವಿರುದ್ಧ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಯುದ್ಧ ಎದುರಿಸಲಿ ಎನ್ನುವ ಗಟ್ಟಿಯಾದ ಮಾತುಗಳು ಭಾರತದ ಮುಖಂಡರಿಂದ ಹೊರಬಿದ್ದಿದೆ ಗುಪ್ತಚರ ಸಂಸ್ಥೆ ಹೇಳಿದೆ.
ಕಳೆದ ನವೆಂಬರ್ ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 195 ಮಂದಿ ಸಾವನ್ನಪ್ಪಿದ್ದರು, ನೂರಾರು ಜನ ಗಾಯಗೊಂಡಿದ್ದರು. ಮುಂಬೈ ದಾಳಿಯ ನಂತರ ಭಾರತೀಯ ಸೇನಾ ಪಾಕ್ ಮೇಲೆ ಯುದ್ಧ ಸಾರಲು ಎಲ್ಲ ತಯಾರಿಯನ್ನೂ ನಡೆಸಿದ್ದು, ಶಸ್ತ್ರಸಜ್ಜಿತವಾಗಿದೆ. ಪ್ರಧಾನಮಂತ್ರಿಯವರ ಗ್ರೀನ್ ಸಿಗ್ನಲ್ ಬೀಳುವುದೊಂದೆ ಬಾಕಿ ಇದೆ. ಭಾರತಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಯುದ್ಧವೊಂದೇ ಏಕೈಕ ಮಾರ್ಗ:ಬಾಳಾ ಠಾಕ್ರೆ
ತಾಲಿಬಾನ್ ಉಗ್ರರಿಂದ ಪಾಕಿಗೆ ಬೆಂಬಲ












Click it and Unblock the Notifications