ಕುರುಬರಿಗಾಗಿ ಸಿದ್ದು ಬಿಜೆಪಿ ಜೊತೆ ಮೈತ್ರಿ
ಬೆಂಗಳೂರು, ಡಿ.10 : ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಡುವೆ ರಹಸ್ಯ ಒಪ್ಪಂದ ಆಗಿರುವುದು ಖಚಿತ ಎನ್ನಲಾಗಿದೆ. ವಿಧಾನಸಭೆ ಮರುಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ತಮ್ಮ ಬೆಂಬಲಿಗರು ಮತ್ತು ತಾವು ಪ್ರತಿನಿಧಿಸುವ ಸಮುದಾಯಕ್ಕೆ ಸಿದ್ದರಾಮಯ್ಯ ಸಂದೇಶ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಇದು ಮಾಡು ಇಲ್ಲವೇ ಮಡಿ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ನಲ್ಲಿನ ಸಿದ್ದು ಅಸಮಾಧಾನದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಬಿಜಿಪಿ ತಂತ್ರ ರೂಪಿಸಿದೆ. ಉಪಚುನಾವಣೆಯಲ್ಲಿ ಜೆಡ್ಎಸ್ - ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿವೆ ಎಂದೇ ಹೇಳಲಾಗಿತ್ತು. ಆದರೆ, ಹಿಂದುಳಿದ ವರ್ಗಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಿದ ಚರ್ಚೆ ಫಲಕಾರಿಯಾಗಿದೆ.
ಸಿದ್ದರಾಮಯ್ಯ ಬಿಜೆಪಿ ಜತೆಗೆ ಗುರುತಿಸಿಕೊಂಡರೆ ಅವರು ಪ್ರತಿನಿಧಿಸುವ ಕುರುಬ ಜನಾಂಗ ಅವರ ಜತೆಗಿದೆ. ಸಿದ್ದು ತೆಗೆದುಕೊಳ್ಳುವ ತೀರ್ಮಾನಕ್ಕೆ ಸಮುದಾಯದ ಮುಖಂಡರು ತಲೆಬಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಿದ್ದು ಅವರನ್ನು ಸೆಳೆದುಕೊಂಡರೆ ಕುರುಬ ಸಮಾಜದ ಅಷ್ಟೂ ಮತಗಳನ್ನು ಪಡೆಯಬಹುದು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ. ಮರು ಚುನಾವಣೆಯ ಕುರುಬ ಸಮಾಜದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಒಂದೆರೆಡು ಕ್ಷೇತ್ರಗಳಲ್ಲಿ ಈ ಮತಗಳು ನಿರ್ಣಾಯಕ ಎನಿಸಲಿದ್ದಾರೆ. ಅರಭಾವಿಯಲ್ಲಿ ಕುರುಬ ಸಮಾದ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನವಿಲ್ಲದೆ ಮೂಲೆ ಗುಂಪಾಗಿರುವ ಸಿದ್ದು, ಬಿಜೆಪಿ ಜತೆ ಬೆಳೆಸಲು ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಿದಾಗಲೂ ಅವರನ್ನು ಭೇಟಿ ಮಾಡಲು ಸಿದ್ದು ಮನಸ್ಸು ಮಾಡಿಲ್ಲ. ಅಲ್ಲದೇ ಕೆಪಿಸಿಸಿ ನಾಯಕರು ತಮಗೆ ಈ ವರೆಗೂ ಚುನಾವಣೆಗೆ ಸಂಬಂಧಸಿದಂತೆ ಚರ್ಚಿಸದಿರುವುದು ಸಿದ್ದು ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.
ಮರುಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕುರುಬ ಮತದಾರರ ಅಂಕಿ ಅಂಶಗಳು
* ಅರಭಾವಿ - 35 ಸಾವಿರ
* ಮದ್ದೂರು - 25 ಸಾವಿರ
* ದೊಡ್ಡಬಳ್ಳಾಪುರ - 20 ಸಾವಿರ
* ಮಧುಗಿರಿ - 10
* ದೇವದುರ್ಗ - 20 ಸಾವಿರ
* ತುರುವೇಕೆರೆ - 15 ಸಾವಿರ
(ದಟ್ಸ್ ಕನ್ನಡವಾರ್ತೆ)












Click it and Unblock the Notifications