1090:ಭಾರತದ ಮ್ಯಾಜಿಕ್ ನಂಬರ್
ಭಾರತ, ಡಿ. 5 : ದೇಶವನ್ನು ಹಿಂಡುತ್ತಿರುವ ಆತಂಕವಾದದ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ಚಟುವಟಿಕೆಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ನಿಗಾವಹಿಸಿರಿ. ಕಾರ್ಯೋನ್ಮುಖರಾಗಿರಿ. ಭಯೋತ್ಪಾದನೆ ನಿಗ್ರಹ ದಳಕ್ಕೆ ದೂರವಾಣಿ ಕರೆಮಾಡಿ ಚಕ್ ಅಂತ ಮಾಹಿತಿ ಕೊಡಿ.ಇದಕ್ಕಾಗಿಯೇ ಉಚಿತ ಕರೆ ಸೌಲಭ್ಯದ ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.
ಈ ಸಂಪರ್ಕ ಸೇತುವಿಗೆ 'ಅಖಿಲ ಭಾರತ ಭಯೋತ್ಪಾದನೆ ನಿಗ್ರಹ ಉಚಿತ ಕರೆ ನೆರವು ಕೊಂಡಿ 1090' ಎಂದು ಹೆಸರಿಸಲಾಗಿದೆ.
ನಾಗರಿಕರಿಂದ ಬರುವ ಇಂಥ ಕರೆಗಳನ್ನು ಭಯೋತ್ಪಾದಕ ನಿಗ್ರಹ ದಳ ತತ್ ಕ್ಷಣ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತದೆ. 1090 ಸಂಖ್ಯೆ ಭಾರತದಾದ್ಯಂತ ದೇಶದ ಯಾವ ಭಾಗದಿಂದಲಾದರೂ ಬಳಸಬಹುದಾಗಿದೆ. ನಿಮ್ಮ ಮೊಬೈಲ್ ಫೋನಿನಿಂದಲೂ ಕರೆ ಮಾಡಬಹುದು. ಕರೆ ಮಾಡುವ ನಾಗರಿಕರ ಹೆಸರನ್ನು ಗೋಪ್ಯವಾಗಿ ಇಡಲಾಗುತ್ತದೆ.
ಈ ವಿಚಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಿಳಿದಿರಲಿ. ನಿಮ್ಮ ಇಮೇಲ್ ಅಡ್ರ್ಸ್ ಬುಕ್ಕಿನಲ್ಲಿರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಲಿಂಕ್ ಸಮೇತ ಫಾರ್ವರ್ಡ್ ಮಾಡಿ.
(ದಟ್ಸ್ ಕನ್ನಡ ಮಾಹಿತಿ ಕೇಂದ್ರ)












Click it and Unblock the Notifications