ದೆಹಲಿ ನ್ಯಾಯಾಲಯ ಸ್ಫೋಟ, ಹುಸಿ ಬೆದರಿಕೆ
ನವದೆಹಲಿ, ಡಿ. 4: ನಗರದ ತಿಸ್ ಹಜಾರಿ ನ್ಯಾಯಾಲಯದ ಆವರಣದೊಳಗೆ ಬಾಂಬ್ ಸ್ಫೋಟಸುವುದಾಗಿ ಅನಾಮೆಧೇಯ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ಕೆಲ ಕಾಲ ನ್ಯಾಯಾಲಯದ ಸುತ್ತಮುತ್ತ ಭೀತಿ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ನ್ಯಾಯಾಲಯದ ಕಾರ್ಯಕಲಾಪಗಳನ್ನು ಸಹ ಸ್ಥಗಿತಗೊಳಿಸಿದ ಘಟನೆ ಇಂದು ನಡೆದಿದೆ.
ಇಂದು ಬೆಳಗ್ಗೆ 9.12 ರ ವೇಳೆಗೆ ನ್ಯಾಯಾಲಯ ಸಮೀಪವಿರುವ ಪೊಲೀಸ್ ಠಾಣೆಗೆ ನ್ಯಾಯವಾದಿಗಳ ಧಿರಿಸುವಿನಲ್ಲಿರುವ ಆರು ಮಂದಿ ಉಗ್ರರು ನ್ಯಾಯಾಲಯದ ಆವರಣ ಹೊಕ್ಕಿದ್ದು, ಇಷ್ಟರಲ್ಲಿಯೇ ಬಾಂಬ್ ಸ್ಫೋಟ ನಡೆಯಲಿದೆ ಎನ್ನುವ ಕರೆ ಬಂದಿತ್ತು.
ಘಟನೆ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರರು ಬಾಂಬ್ ನಿಷ್ಕೃಯ ದಳದೊಂದಿಗೆ ನ್ಯಾಯಾಲಯದ ಆವರಣಕ್ಕೆ ದೌಡಾಯಿಸಿದರು. ನ್ಯಾಯಾಲಯದ ಆವರಣದೊಳಗೆ ಬಾಂಬ್ ಸ್ಫೋಟಿಸುವ ಬೆದರಿಕೆ ಇಧೆ ಜನರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ಸಾರ್ವಜನರ ಚೆಲ್ಲಾಪಿಲ್ಲಾಯಾಗಿ ಹೊರನಡೆದರು.
ಶ್ವಾನದಳ ಸೇರಿದಂತೆ ಬಾಂಬ್ ನಿಷ್ಕೃಯ ದಳದ ಸಿಬ್ಬಂದಿ ನ್ಯಾಯಾಲಯದ ಅವರಣವನ್ನು ಕೂಲಂಕಷವಾಗಿ ಶೋಧಿಸಿದ ನಂತರ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟರು. ಮುಂಬೈ ಭಯೋತ್ಪಾದನೆ ಹಾಗೂ ಹೈದರಾಬಾದ್ ನಲ್ಲಿ ಉಗ್ರರು ಪರಾರಿಯಾಗಿರುವುದು ಜನರು ಆತಂಕ ಪಡಲು ಮತ್ತಷ್ಟು ಕಾರಣವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications