ಸಂದೀಪ ಕುಟುಂಬದ ಕ್ಷಮೆಯಾಚಿಸಿದ ಕೇರಳ ಸಿಎಂ

ತಿರುವನಂತಪುರಂ, ಡಿ. 3 : ಮೇಜರ್ ಸಂದೀಪ್ ಕುಟುಂಬಕ್ಕೆ ಅವಮಾನಕರವಾಗಿ ಮಾತನಾಡಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಕೇರಳದ ಮುಖ್ಯಮಂತ್ರಿ ವಿ ಎಸ್ ಅಚ್ಯುತನಂದನ್ ನನ್ನಿಂದ ತಪ್ಪಾಗಿದ್ದರೆ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ. ಹಾಗೆಯೇ ನಾನು ಸಂದೀಪ ಕುಟುಂಬಕ್ಕೆ ನಾಯಿ ಪದ ಬಳಿಸಿ ನಿಂದನೆ ಮಾಡಿಲ್ಲ. ಪತ್ರಕರ್ತರು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿವೆ ಎಂದು ಅಚ್ಯುತನಂದನ್ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ.

ಸಂದೀಪ ಕುಟುಂಬಕ್ಕೆ ಮಾಡಿದ್ದ ಅವಹೇಳನಕಾರಿ ಮಾತುಗಳಿಂದ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಅಚ್ಯುತನಂದನ್ ಅವರನ್ನು ಕೂಡಲೇ ಸಿಎಂ ಪದವಿಯಿಂದ ಕೆಳಗಿಳಿಸಬೇಕು ಎಂದು ಕರ್ನಾಟಕ, ಮಹಾರಾಷ್ಟ್ರ, ತಮಿಳನಾಡು ಸೇರಿ ಎಲ್ಲ ಭಾಗಗಳಿಂದಲೂ ತೀವ್ರ ಒತ್ತಡ ಹೆಚ್ಚಿತ್ತು. ಅಚ್ಯುತನಂದನ್ ಸಂದೀಪ ಕುಟುಂಬಕ್ಕೆ ಮಾಡಿರುವ ಮಾತುಗಳು ತೀವ್ರವಾಗಿ ಘಾಸಿಗೊಳಿಸಿವೆ. ವೀರ ಯೋಧನ ಕುಟುಂಬಕ್ಕೆ ಮುಖ್ಯಮಂತ್ರಿಯೊಬ್ಬರು ಅವಹೇಳನಕಾರಿ ಮಾತುಗಳನ್ನಾಡುವುದು ಅಕ್ಷಮ್ಯ. ಕೂಚಲೇ ಅವರನ್ನು ಸಿಎಂ ಪದವಿಯಿಂದ ಕೆಳಗಿಳಿಸಿ ಎಂದು ಜನರು ಆಗ್ರಹಿಸಿದ್ದರು.

ಅದ್ದರಿಂದ ಕೂಡಲೇ ಅವರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕೇರಳದ ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪಟ್ಟು ಹಿಡಿದಿದ್ದವು. ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನೂ ಸಹ ನೀಡಿದ್ದವು. ಇದರ ಬೆನ್ನೆಲ್ಲೇ ಸಿಪಿಐ(ಎಂ) ಪ್ರದಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಅಚ್ಯುತನಂದನ್ ವಿರುದ್ಧ ತೀವ್ರ ಆಕ್ರೋಷ ವ್ಯಕ್ತಪಡಿಸಿದ್ದರು. ಅವರ ತಪ್ಪಿಗೆ ನಾನು ಕ್ಷಮೆಯಾಚಿಸುವೆ ಎಂದು ಹೇಳಿದ್ದರು. ಈ ಎಲ್ಲದರ ಪರಿಣಾಮವಾಗಿ ಇಂದು ಅಚ್ಯುತನಂದನ್ ಕ್ಷಮೆಯಾಚಿಸಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಸಾರಿ ಕೇಳುವೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಸಂತಾಪ ಸೂಚನೆ ರಾಜಕೀಯಕ್ಕೆ ಸಂತಾಪ
ಕೇರಳ ಸಿಎಂ ಹೇಳಿಕೆ, ಕಾರಟ್ ಕ್ಷಮೆಯಾಚನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+