ನ್ಯಾನೋ ಹೋದರೇನಂತೆ ಮಾರ್ಕೊಪೊಲೊ ಬಂತು

ಬೆಂಗಳೂರು, ನ.2: ಶೀಘ್ರದಲ್ಲೇ 2 ಸಾವಿರಕ್ಕೂ ಅಧಿಕ ಹೊಸ ಬಸ್ ಗಳನ್ನು ಪ್ರಯಾಣಿಕರ ಸೇವೆಗಾಗಿ ರಸ್ತೆಗೆ ಬಿಡಲಾಗುವುದು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಪ್ರಕಟಣೆ ತಿಳಿಸಿದೆ. ಇದರ ಜೊತೆಗೆ ರಾಜ್ಯೋತ್ಸವದ ಕೊಡುಗೆಯಾಗಿ ಅಗ್ಗದ ದರದಲ್ಲಿ ಐಷಾರಾಮಿ ಮಾರ್ಕೊಪೊಲೊ ಬಸ್ ಗಳಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಗುವುದು. ರಾಜ್ಯ ಸಾರಿಗೆ ಸಂಸ್ಥೆಗಾಗಿ ಸುಮಾರು 3000 ಕ್ಕೂ ಅಧಿಕ ಬಸ್ಸುಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಸಚಿವ ಅಶೋಕ್ ಅವರೇ ಟಾಟಾ ಸಂಸ್ಥೆಯ ಮಾರ್ಕೋಪೊಲೊ ಹವಾನಿಯಂತ್ರಿತ ಬಸ್ಸುಗಳಿಗೆ ಚಾಲನೆ ನೀಡಿದರು.

45 ಸುಖಾಸೀನಗಳ ಹೊಂದಿರುವ ಮಾರ್ಕೋಪೊಲೊ ಬಸ್ ಬೆಲೆ ವೋಲ್ವೊ ಬಸ್ ಗಿಂತ ಕಡಿಮೆಯಾಗಿದೆ. ಮಾರ್ಕೊಪೊಲೊ ಬಸ್ ವೊಂದಕ್ಕೆ 55 ಲಕ್ಷ ರು ಆದರೆ, ವೊಲ್ವೋ ಬಸ್ ಗೆ 70 ಲಕ್ಷ ರು ತಗುಲುತ್ತದೆ. ಟಾಟಾ ಬಸ್ ಗಳ ಚಾಲನೆ ಹಾಗೂ ನಿಯಂತ್ರಣ ವೆಚ್ಚ ಕೂಡ ತುಂಬಾ ಕಡಿಮೆ, ಹಾಗಾಗಿ ಸಾಧಾರಣ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರು ಇನ್ಮುಂದೆ ಮಾರ್ಕೊಪೊಲೊ ಬಸ್ಸುಗಳಲ್ಲಿ ಪ್ರಯಾಣಿಸುವ ಸುವರ್ಣ ಅವಕಾಶ ಲಭ್ಯವಾಗಲಿದೆ ಎಂದು ಸಾರಿಗೆ ಸಚಿವರು ಹೇಳಿದರು.

ಒಂದೆರಡು ಮಾರ್ಕೊಪೊಲೊ ಬಸ್ ಗಳನ್ನು ಪ್ರಯೋಗಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆಯ ಮೇರೆಗೆ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಐಟಿ, ಬಿಟಿ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಖಾಸಗಿ ಬಸ್ ಗಳ ಬದಲು ಸಕಲ ಸೌಲಭ್ಯಯುಕ್ತ ಮಾರ್ಕೊಪೊಲೊ ಬಸ್ ಬಳಸಲು ಮುಂದಾಗಬೇಕು ಎಂದು ಸಚಿವ ಅಶೋಕ್ ಕರೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ದೇವನಹಳ್ಳಿಗೆ ಟಾಟಾ ಮಾರ್ಕೊಪೋಲೊ ಬಸ್
ರಾಜ್ಯಕ್ಕೆ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
ಧಾರವಾಡಕ್ಕೆ ಟಾಟಾ ಮಾರ್ಕೋಪೊಲೋ ಬಸ್
ಟಾಟಾ ನ್ಯಾನೊಗೆ ಪ್ರತಿಸ್ಪರ್ಧಿಯಾಗಿ ಅಜಂತಾ ಕಾರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+