ಮೊಹಾಲಿಯಲ್ಲಿ ತಲೆಕೆಳಗಾಗಿ ಹಾರಾಡಿದ ರಾಷ್ಟ್ರಧ್ವಜ!
ಮೊಹಾಲಿ, ಅ.17: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ನಲ್ಲಿ ಭಾರತದ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತ್ತಿರುವ ದೃಶ್ಯ ಕಂಡು ಬಂತು. ಶುಕ್ರವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು.
ಶೋಭಾಯಮಾನವಾದ ಪಿಸಿಎ ಕ್ರೀಡಾಂಗಣದ ಉತ್ತರ ಪೆವಿಲಿಯನ್ ವಿಭಾಗದ ಮೇಲೆ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತ್ತ್ತಿತ್ತು.ಹಸಿರು ಬಣ್ಣ ಮೇಲ್ಮುಖವಾಗಿ ಹಾಗೂ ಕೇಸರಿ ಬಣ್ಣ ಕೆಳಮುಖವಾಗಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ನಂತರ ಇದನ್ನು ಗಮನಿಸಿ ಎಚ್ಚೆತ್ತುಕೊಂಡ ಪಿಸಿಎ ಕ್ರೀಡಾಂಗಣದ ಅಧಿಕಾರಿಗಳು ನಿರ್ವಾಹಕ ದಲ್ಜೀತ್ ಸಿಂಗ್ ಗಮನಕ್ಕೆ ತಂದು ಸರಿಪಡಿಸಿದರು. ಸುಮಾರು 30 ನಿಮಿಷಗಳ ಕಾಲ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡಿತು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)
ಲಾರಾ ದಾಖಲೆ ಮುರಿದ ಸಚಿನ್ ತೆಂಡೂಲ್ಕರ್












Click it and Unblock the Notifications