ನಗರದಲ್ಲಿ ಮತ್ತೊಬ್ಬ ವಿರಕ್ತ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು, ಅ.14: ಇತ್ತೀಚೆಗೆ ಐಟಿ ವಲಯದ ತಂತ್ರಜ್ಞರು ಮಾನಸಿಕ ಒತ್ತಡವನ್ನು ಸಹಿಸಲಾಗದೇ ಸಾವಿಗೆ ಶರಣಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಮೈಸೂರು ಇನ್ಫಿಯ ಸಾಫ್ಟ್ ವೇರ್ ತಜ್ಞೆ ಪೂಜಾ ಸಾವನ್ನಪ್ಪಿದ ಬೆನ್ನಲ್ಲೇ ನಗರದ ಕೃಷ್ಣ ಬಾಬು(25) ಎಂಬ ತರುಣ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೆಚ್ ಪಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಕೃಷ್ಣಬಾಬು ಅವರು ತಮ್ಮ ಮರಣ ಪತ್ರದಲ್ಲಿ 'ನಾನು ಬಹಳ ದಿನಗಳಿಂದ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದೆ. ಕೆಲಸದ ಒತ್ತಡದಿಂದ ಜರ್ಝರಿತನಾಗಿದ್ದೆ.ಇದಕ್ಕೆ ಸಾವೇ ಪರಿಹಾರ ಎಂದು ನನಗನಿಸಿದೆ ಎಂದು ಬರೆದಿದ್ದಾರೆ.ಪೊಲೀಸರ ಪ್ರಕಾರ ಶುಕ್ರವಾರ ರಾತ್ರಿಯೇ ಸಾವು ಸಂಭವಿಸಿರುವ ಸಾಧ್ಯತೆಯಿದೆ.

ಆಂಧ್ರಪ್ರದೇಶದ ಪೆನಗೊಂಡ ಮೂಲದ ಕೃಷ್ಣಬಾಬು ಮಾರುತಿನಗರದಲ್ಲಿ ಒಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವೀಕೆಂಡ್ ಸಮಯವಾದ್ದರಿಂದ ಅವರನ್ನು ಯಾರು ಸಂಪರ್ಕಿಸಿರಲಿಲ್ಲ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆಎಂದು ಮಡಿವಾಳ ಠಾಣೆಯ ಪೊಲೀಸರು ಹೇಳಿದ್ದಾರೆ.
(ದಟ್ಸ್ ಕನ್ನಡವಾರ್ತೆ)

ಮೈಸೂರಿನಲ್ಲಿ ಇನ್ ಫೋಸಿಸ್ ಉದ್ಯೋಗಿ ಅತ್ಮಹತ್ಯೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+