ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲಾ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ

By Staff
|
Google Oneindia Kannada News

ಬೆಂಗಳೂರು, ಸೆ.25:ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲಾ ಶಾಲಾ ವಾಹನಗಳಿಗೆ ಉಚ್ಫ ನ್ಯಾಯಾಲಯದ ತೀರ್ಪಿನ ಆನ್ವಯ ಸ್ಪೀಡ್ ಗವರ್ನರ್(ವೇಗ ನಿಯಂತ್ರಕ) ಬಳಕೆಯನ್ನು ಕಡ್ಡಾಯಗೊಳಿಸಿರುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ಶಾಲೆಗಳ ಮುಖ್ಯಸ್ಥರು ಈ ಬಗ್ಗೆ ಕೂಡಲೇ ಗಮನಹರಿಸಿ ಅವರ ವಿದ್ಯಾ ಸಂಸ್ಥೆಗಳಲ್ಲಿ ಉಪಯೋಗಿಸುತ್ತಿರುವ ಶಾಲಾ ವಾಹನಗಳಿಗೆ ಸೆ.30ರೊಳಗಾಗಿ ಸ್ಪೀಡ್ ಗವರ್ನರ್ ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ.

ಈ ಕೆಳಕಂಡ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಸೂಚಿಸಿದೆ.
* ಶಾಲಾ ವಾಹನಗಳಿಗೆ ಕಡ್ಡಾಯವಾಗಿ ಹೈ.ವೇ ಹಳದಿ ಬಣ್ಣ ಬಳಿದಿರಬೇಕು. ಕಪ್ಪುಬಣ್ಣದ ಅಕ್ಷರಗಳಲ್ಲಿ ಶಾಲಾ ವಾಹನ ಎಂದು ವಾಹನದ ನಾಲ್ಕು ಭಾಗಗಳಲ್ಲಿ ಬರೆದಿರಬೇಕು.
* ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣಗಳು ಮತ್ತು ಬಾಗಿಲುಗಳನ್ನು ಸುರಕ್ಷಿತವಾಗಿ ಲಾಕ್ ಮಾಡುವ ವ್ಯವಸ್ಥೆ ಹೊಂದಿರಬೇಕು.
* ವಾಹನಗಳ ಚಾಲಕರು ಕನಿಷ್ಠ ಐದು ವರ್ಷ ಚಾಲನಾ ಅನುಭವ ಹಾಗೂ ಸಿಂಧುತ್ವ ಇರುವ ಅನುಜ್ಞಾ ಪತ್ರ ಹೊಂದಿರಬೇಕು.
* ವಾಹನಕ್ಕೆ ಸಿಂಧುತ್ವ ಇರುವ ಅರ್ಹತಾ ಪತ್ರ ಹಾಗೂ ರಹದಾರಿ ಹೊಂದಿರಬೇಕು. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಪ್ರಯಾಣದ ಸಮಯದಲ್ಲಿ ವಿದ್ಯಾಸಂಸ್ಥೆಯಿಂದ ಭದ್ರತಾ ಸಿಬ್ಬಂದಿ ಮತ್ತು ಆಸನಗಳ ಕೆಳಗೆ ಶಾಲಾ ಬ್ಯಾಗ್‌ಗಳನ್ನು ಇರಿಸಲು ಸೂಕ್ತ ಸ್ಥಳಾವಕಾಶ ಒದಗಿಸಿರಬೇಕು.
* ನಿಗಧಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯಬಾರದು. ಶಾಲಾ ವಾಹನಗಳ ನಿರ್ವಹಣೆಯ ಜವಾಬ್ದಾರಿ ಶಾಲೆಯ ಆಡಳಿತ ಮಂಡಳಿಯವರಿಗೆ ಸೇರಿದ್ದು, ಮಕ್ಕಳ ಸುರಕ್ಷತೆ ಹಾಗೂ ಅಪಘಾತ ನಿಯಂತ್ರಣ ದೃಷ್ಟಿಯಿಂದ ಮೇಲ್ಕಂಡ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಶಾಲಾ ವಾಹನಗಳ ನಿರ್ವಹಣೆಯ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸಿದಲ್ಲಿ ಆಯಾ ವಿದ್ಯಾಸಂಸ್ಥೆಯ ಮುಖ್ಯಸ್ಥರೇ ಜವಾಬ್ದಾರರಾಗುತ್ತಾರೆ ಎಂದು ಸಚಿವಾಲಯದಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(ದಟ್ಸ್ ಕನ್ನಡವಾರ್ತೆ)

ಸ್ಪೀಡ್ ಗವರ್ನರ್ ಅಳವಡಿಕೆ ವಿರೋಧಿಸಿ ಮುಷ್ಕರ
ಫಲ್ಗುಣಿ ನದಿ ದುರಂತದ ಬಗ್ಗೆ ಪೊಲೀಸ್ ವರದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X