ಮಂಗಳೂರಲ್ಲಿ ಮಾನವ ಹಕ್ಕು ಆಯೋಗದ ಅಧ್ಯಕ್ಷ
ಮಂಗಳೂರು, ಸೆ. 25 : ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಮತ್ತು ಅವರ ತಂಡ ಗುರುವಾರ, ಸೆಪ್ಟೆಂಬರ್ 25ರಂದು ಮತಾಂತರ ಗಲಭೆಯಲ್ಲಿ ಹಾನಿಗೊಳಗಾಗಿರುವ ಮಂಗಳೂರಿನ ಚರ್ಚ್ ಪೂರ್ ಕ್ಲೇರ್ಸ್ ಪರ್ಪೇಚುವಲ್ ಅನ್ನು ಸಂದರ್ಶಿಸಿತು. ಮಂಗಳೂರು ಮತ್ತಿತರ ಜಿಲ್ಲೆಗಳಲ್ಲಿ ಹಾನಿಗೊಳಗಾಗಿರುವ ಚರ್ಚ್ ಗಳ ವೀಕ್ಷಣೆಯನ್ನು ಕೇಂದ್ರ ಸರ್ಕಾರದ ನಿಯೋಗ ಮಾಡಿರುವ ಬೆನ್ನ ಹಿಂದೆಯೇ ನ್ಯಾಯಮೂರ್ತಿ ನಾಯಕ್ ಮಂಗಳೂರು ಭೇಟಿ ನೀಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಾಯಕ್ ಅವರೊಡನೆ ಆರ್.ಎಚ್. ರೆಡ್ಡಿ, ಐಜಿಪಿ ಬಿಪಿನ್ ಗೋಪಾಲ ಕೃಷ್ಣ, ಜಿತೇಂದ್ರನಾಥ್ ಮುಂತಾದವರಿದ್ದರು.
(ಚಿತ್ರಕೃಪೆ : ಆರ್.ಕೆ.ಭಟ್, ಮಂಗಳೂರು)












Click it and Unblock the Notifications