ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣು ರಾಷ್ಟ್ರವಾಗಲು ಭಾರತಕ್ಕೆ ಇನ್ನೊಂದೆ ಮೆಟ್ಟಿಲು

By Staff
|
Google Oneindia Kannada News

ವಾಷಿಂಗ್ ಟನ್, ಸೆ. 24 : ಕೊನೆಗೂ ಮಹತ್ವಕಾಂಕ್ಷೆಯ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಸೆನೆಟ್ ಸಮಿತಿ ಒಪ್ಪಿಗೆ ಸೂಚಿಸಿದೆ. ಮಂಗಳವಾರ ಸಂಜೆ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಮೆರಿಕ ತಲುಪಿದ ಕೆಲ ಹೊತ್ತಿನಲ್ಲಿಯೇ ಅಮೆರಿಕ ವಿದೇಶಾಂಗ ಇಲಾಖೆಯ ಸೆನೆಟ್ ಸಮಿತಿ ಸರ್ವ ಸಮ್ಮತ ಒಪ್ಪಿಗೆ ಸೂಚಿಸಿ ಅಣು ಒಪ್ಪಂದವನ್ನು ಅಂಗೀಕರಿಸಿದ ಸುದ್ದಿ ಹೊರಬಿದ್ದಿದೆ. ತೀವ್ರ ಟೀಕೆ ಟಿಪ್ಪಣಿಗಳ ನಡುವೆ ಯುಪಿಎ ಸರ್ಕಾರ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಒಪ್ಪಂದದ ಪರ ಇರುವವರು ವಿಜಯೋತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.

ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಪರ-ವಿರೋಧಿವಿರುವ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಸೆನೆಟ್ ನ 21 ಮಂದಿ ಸದಸ್ಯರ ಸಮಿತಿಯಲ್ಲಿ ಮತಗಳು ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು. 21 ಮಂದಿ ಸದಸ್ಯರಲ್ಲಿ 19 ಸದಸ್ಯರು ಒಪ್ಪಂದದ ಪರಮತ ಚಲಾಯಿಸಿದರೆ, ಉಳಿದ ಇಬ್ಬರು ರಸೆಲ್ ಫಿನ್ ಗೋಲ್ಡ್ ಹಾಗೂ ಬಾರ್ಬರಾ ಬಾಕ್ಸರ್ ಎಂಬ ಇಬ್ಬರು ಸೆನೆಟ್ ಸದಸ್ಯರು ಒಪ್ಪಂದ ವಿರೋಧಿಸಿ ಮತ ಚಲಾಯಿಸಿದರು. ಒಪ್ಪಂದದ ಪರ ಬಹುಮತ ಸಾಬೀತಾಗಿದ್ದರಿಂದ ಒಪ್ಪಂದವನ್ನು ಸೆನೆಟ್ ನಲ್ಲಿ ಪಾಸ್ ಮಾಡುವ ನಿರ್ಣಯ ಕೈಗೊಳ್ಳಲಾಯಿತು. ಇದರೊಂದಿಗೆ ಒಪ್ಪಂದ ಅಂತಿಮ ಘಟ್ಟ ತಲುಪಿದ್ದು, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಸಹಿ ಬಿದ್ದಲ್ಲಿ, ಭಾರತ ಅಮೆರಿಕ ಪರಮಾಣು ಒಪ್ಪಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಅಮೆರಿಕ ಬಾವಿ ಅಧ್ಯಕ್ಷನೆಂದು ಬಿಂಬಿತರಾಗಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಜೋಸೆಫ್ ಬಿಡೆನ್ ಒಪ್ಪಂದ ಪರ ಸಹಮತ ಸೂಚಿಸಿರುವುದು ವಿಶೇಷ ಬೆಳವಣಿಗೆಯಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ನೂತನ ಮೈಲುಗಲ್ಲುನ್ನು ಸಾಧಿಸಿದಂತಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಸೆಪ್ಟೆಂಬರ್ ಒಳಗೆ ಅಣು ಒಪ್ಪಂದ ಸಹಿ : ಅಮೆರಿಕ
ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X