ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿಗೆ ಕೋರಿಕೆ

By Staff
|
Google Oneindia Kannada News

ಬೆಂಗಳೂರು, ಸೆ. 24 : ಅಮೆರಿಕದ ಕಾನ್ಸುಲೇಟ್ ನ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸುವಂತೆ ಕಾನ್ಸುಲೇಟ್ ಜನರಲ್ ಅಂಡ್ರ್ಯೂ ಸಿಮ್ ಕಿನ್ ಅವರಿಗೆ ಗೃಹ ಸಚಿವ ವಿ.ಎಸ್.ಆಚಾರ್ಯ ಮನವಿ ಮಾಡಿಕೊಂಡಿದ್ದಾರೆ.

ಚೆನ್ನೈನಲ್ಲಿರುವ ಕಾನ್ಸುಲೇಟ್ ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಿಮ್ ಕಿನ್ ನೇತೃತ್ವದ ನಿಯೋಗ ಬೆಂಗಳೂರಿಗೆ ಆಗಮಿಸಿ ಗೃಹ ಸಚಿವರನ್ನು ಮಂಗಳವಾರ ಭೇಟಿ ಮಾಡಿತು. ಈ ಸಮಯದಲ್ಲಿ ಸಚಿವ ಆಚಾರ್ಯ ನಗರದಲ್ಲಿ ಕಾನ್ಸುಲೇಟ್ ಕಚೇರಿಯನ್ನು ತೆರೆಯುವ ಕೋರಿಕೆಯನ್ನು ಅವರ ಮುಂದಿಟ್ಟರು. ಆದರೆ, ಕಾನ್ಸುಲೇಟ್ ಕಚೇರಿಯನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ತೆರೆಯುವ ಸಾಧ್ಯತೆಗಳಿಲ್ಲ ಎಂಬುದಾಗಿ ಸಿಮ್ ಕಿನ್ ಅವರು ನಗರದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿರುವುದು ತಿಳಿದು ಬಂದಿದೆ.

ಸಿಮ್ ಕಿನ್ ಭೇಟಿ ಸಂದರ್ಭವನ್ನು ಉಪಯೋಗಿಸಿಕೊಂಡು ಮಾಹಿತಿ, ಜೈವಿಕ ಮತ್ತು ನ್ಯಾನೋ ತಂತ್ರಜ್ಞಾನದಲ್ಲಿ ರಾಜ್ಯ ಸಾಧಿಸಿರುವ ಪ್ರಗತಿ ಕುರಿತಂತೆ ಮಾಹಿತಿ ನೀಡಲಾಯಿತು ಎಂದು ಆಚಾರ್ಯ ಹೇಳಿದರು. ನಗರದ ನಾನಾ ಕಂಪನಿಗಳಲ್ಲಿ 7 ಸಾವಿರ ಅಮೆರಿಕದ ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 45 ರಿಂದ 50 ಸಾವಿರ ಮಂದಿ ಭಾರತೀಯರು ವಿಸಾ ಅಡಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಕಾನ್ಸುಲೇಟ್ ಪ್ರಾದೇಶಿಕ ಕಚೇರಿ ತೆರೆಯಲು ಅಗತ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಚರ್ಚೆ ಸಂದರ್ಭದಲ್ಲಿ ಸಿಮ್ ಕಿನ್ ಗಮನಕ್ಕೆ ತರಲಾಗಿದೆ ಎಂದು ಆಚಾರ್ಯ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X