ಮಂಡ್ಯದಲ್ಲಿ ಸೆ.24ರಿಂದ ವಿಶಿಷ್ಟ ರಂಗ ಸಪ್ತಾಹ

ಮಂಡ್ಯ, ಸೆ. 24 : ಜಿಲ್ಲೆಯ ಕೀಲಾರದ ಕೆ.ವಿ. ಶಂಕರಗೌಡ ಯುವಕರ ಸಂಘ ವಿಶಿಷ್ಟ ಕನ್ನಡ ನಾಟಕಗಳ ರಂಗ ಸಪ್ತಾಹ 'ಶಂಕರಾನಂದ ರಂಗೋತ್ಸವ'ವನ್ನು ಸೆಪ್ಟೆಂಬರ್ 24ರಿಂದ ಸೆಪ್ಟೆಂಬರ್ 30ರವರೆಗೆ ಮಂಡ್ಯದಲ್ಲಿ ಹಮ್ಮಿಕೊಂಡಿದೆ.

ಈ ಏಳು ದಿನಗಳಂದು ಕನ್ನಡ ಖ್ಯಾತ ನಾಟಕಕಾರರ ನಾಟಕಗಳನ್ನು ವಿವಿಧ ಹೆಸರಾಂತ ರಂಗತಂಡಗಳು ಅಭಿನಯಿಸಲಿವೆ. ನಿರ್ದೇಶಕಿ ಬಿ. ಜಯಶ್ರೀ, ಮಂಡ್ಯ ರಮೇಶ್, ಸಿಜಿಕೆಯವರ ರಂಗಸಂಪದ ಸೇರಿದಂತೆ ಆರು ತಂಡಗಳು ಏಳು ನಾಟಕಗಳನ್ನು ಅಭಿನಯಿಸಲಿವೆ. ಬೆಂಗಳೂರು ಹೊರತುಪಡಿಸಿದರೆ ಉಳಿದ ಊರುಗಳಲ್ಲಿ ನಾಟಕ ಪ್ರದರ್ಶನಗಳು ಅಪರೂಪವಾಗಿರುವ ಇಂಥ ಹೊತ್ತಿನಲ್ಲಿ ಅಪರೂಪದ ಕನ್ನಡ ನಾಟಕಗಳು ಮಂಡ್ಯದ ನಾಟಕಪ್ರೇಮಿಗಳ ಮನೆಬಾಗಿಲಿಗೆ ಬಂದು ನಿಂತಿವೆ.

ನಾಟಕದ ವಿವರಗಳು ಕೆಳಗಿನಂತಿವೆ :

ಸೆಪ್ಟೆಂಬರ್ 24
ದೇವನೂರು ಮಹದೇವರ 'ಒಡಲಾಳ'. ರಂಗರೂಪ, ನಿರ್ದೇಶನ : ಸಿ.ಜಿ.ಕೆ., ರಂಗಸಂಪದ, ಬೆಂಗಳೂರು.

ಸೆಪ್ಟೆಂಬರ್ 25
ಚಂದ್ರಶೇಖರ್ ಕಂಬಾರರ 'ಮಹಾಮಾಯಿ'. ನಿರ್ದೇಶನ : ಜೀವನ್ ರಾಮ್ ಸುಳ್ಯ, ಆಳ್ವಾಸ್ ವಿದ್ಯಾಸಂಸ್ಥೆ, ಮೂಡಬಿದಿರೆ.

ಸೆಪ್ಟೆಂಬರ್ 26
ಬಿ. ಸುರೇಶ್ ಅವರ 'ಗಿರಿಜಾ ಕಲ್ಯಾಣ'. ನಿರ್ದೇಶನ : ಬಿ. ಜಯಶ್ರೀ, ಸ್ಪಂದನ, ಬೆಂಗಳೂರು.

ಸೆಪ್ಟೆಂಬರ್ 27
ಕೆ. ರಾಮಯ್ಯ ಅವರ 'ನಾಯಿ ತಿಪ್ಪ'. ನಿರ್ದೇಶನ : ಮಂಡ್ಯ ರಮೇಶ್, ನಟನ, ಮೈಸೂರು.

ಸೆಪ್ಟೆಂಬರ್ 28
ಹಬೀಬ್ ತನ್ವೀರ್ ಅವರ 'ಚೋರ ಚರಣದಾಸ'. ನಿರ್ದೇಶನ : ಮಂಡ್ಯ ರಮೇಶ್, ನಟನ, ಮೈಸೂರು.

ಸೆಪ್ಟೆಂಬರ್ 29
ಪೌರಾಣಿಕ ನಾಟಕ 'ಸಾಮ್ರಾಟ್ ಸುಯೋಧನ'. ನಿರ್ದೇಶನ : ಸಂಜೀವಾಚಾರ್, ಗ್ರಾಮಸ್ಥರು, ಕೀಲಾರ.

ಸೆಪ್ಟೆಂಬರ್ 30
ಕುವೆಂಪು ಅವರ 'ಜಲಗಾರ'. ನಿರ್ದೇಶನ : ಶಶಿ ಅಪೂರ್ವ, ಗೆಳೆಯರ ಬಳಗ, ಮಂಡ್ಯ.

ಪ್ರದರ್ಶನ ಪ್ರತಿದಿನ ಸಂಜೆ 7.30ರಿಂದ ಕೆ.ವಿ. ಶಂಕರಗೌಡ ರಂಗಮಂದಿರದಲ್ಲಿ ಜರುಗಲಿವೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+