ರಾಜ್ಯಾದ್ಯಂತ ಆರೋಗ್ಯ ಕವಚ ಯೋಜನೆ ಜಾರಿ
ಹುಬ್ಬಳ್ಳಿ, ಸೆ. 24 : ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ 'ಆರೋಗ್ಯ ಕವಚ' ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಆರೋಗ್ಯ ಕವಚ ಯೋಜನೆಗಾಗಿ 10 ಕೋಟಿ ರುಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆಯು ಸಂಪರ್ಕವಾಗಿ ಜಾರಿಗೆ ತರುವ ಉದ್ದೇಶದಿಂದ ಹೈದರಾಬಾದ್ ಮೂಲಕ ಎಎಂಆರ್ ಐ ಎಂಬ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು. ಪೋಲಿಯೋ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ ಅವರು, ಅಂಗವಿಕಲರ ಮಾಶಾಸನವನ್ನು 300 ರುಪಾಯಿಗಳಿಂದ 1000 ರುಪಾಯಿಗೆ ಏರಿಸಲಾಗಿದೆ ಎಂದು ಹೇಳಿದರು. ಬಹುಶಃ ದೇಶದಲ್ಲಿ ಮೊದಲ ಬಾರಿಗೆ ಅಂಗವಿಕಲರಿಗೆ ಇಷ್ಟು ದೊಡ್ಡ ಮಟ್ಟದ ಹಣವನ್ನು ನೀಡುತ್ತಿರುವುದು ನಮ್ಮ ಸರ್ಕಾರ ಪ್ರಥಮವಾಗಿಎಂದು ಭುಜತಟ್ಟಿಕೊಂಡರು.
ಮಕ್ಕಳ ಅಭಿವೃದ್ಧಿಗೊಸ್ಕರ ಶಿಶು ಅಬಿವೃದ್ಧಿ ಅಕಾಡಮಿ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜ್ವರದ ಬಾಧೆ
ಮುಖ್ಯಮಂತ್ರಿ ಹುಬ್ಬಳ್ಳಿಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ಮಂಗಳವಾರ ದಿಢೀರ್ ಅಸ್ವಸ್ಥರಾದ ಹಿನ್ನೆಲೆ ಕುಂದಗೋಳದಲ್ಲಿ ಸವಾಯಿ ಗಂಧರ್ವ ಪುಣ್ಯ ತಿಥಿ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳದೆ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರೀ ಹತ್ತು ನಿಮಿಷ ಮಾತನಾಡಿ ಬೆಂಗಳೂರಿಗೆ ತೆರಳಿದರು. ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಮಂಗಳವಾರ ಸಲಹೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಉಗ್ರರನ್ನು ಹತ್ತಿಕ್ಕಲು ಕ್ರಮ : ಯಡಿಯೂರಪ್ಪ












Click it and Unblock the Notifications