ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಓ ಹತ್ಯೆ ಸಮರ್ಥಿಸಿದ್ದ ಆಸ್ಕರ್ ಕ್ಷಮೆಯಾಚನೆ

By Staff
|
Google Oneindia Kannada News

Oscar Fernandes made to eat humble pie
ನವದೆಹಲಿ, ಸೆ. 24 : ಭಾರತದಲ್ಲಿ ಹಣ ಹೂಡಿರುವ ವಿದೇಶಿ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾಗಿದ್ದ ಕೇಂದ್ರ ಕಾರ್ಮಿಕ ಸಚಿವರೇ ಇಂಥ ಹೇಳಿಕೆ ನೀಡಬಹುದೆ? ಗ್ರೇಟರ್ ನೋಯಿಡಾದಲ್ಲಿ ಇಟಲಿ ಮೂಲದ ಕಾರು ಭಾಗಗಳ ತಯಾರಿಕಾ ಕಂಪನಿಯ ಸಿಇಓ ಲಲಿತ್ ಕಿಶೋರ್ ಚೌಧರಿಯನ್ನು ನೌಕರರೇ ಹತ್ಯೆ ಮಾಡಿದ್ದನ್ನು ಸಮರ್ಥಿಸಿಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದ ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಈಗ ತಮ್ಮ ಹೇಳಿಕೆಗಾಗಿ ಕ್ಷಮಾಪಣೆ ಕೇಳಿದ್ದಾರೆ.

ನೌಕರರ ಗೂಂಡಾಗಿರಿನ್ನು ಖಂಡಿಸುವ ಬದಲು 'ಈ ಘಟನೆ ಉಳಿದ ಕಂಪನಿಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಗುತ್ತಿಗೆ ನೌಕರರು ಮತ್ತು ಕಾಯಂ ನೌಕರ ನಡುವೆ ಸಂಬಳದ ವಿಷಯದಲ್ಲಿ ತಾರತಮ್ಯ ತೋರಲಾಗುತ್ತಿದೆ. ಆಡಳಿತ ಮಂಡಳಿ ಇಂಥ ವಿಷಯದಲ್ಲಿ ನೌಕರರ ಮೇಲೆ ಕರುಣೆಯಿಂದ ವರ್ತಿಸಬೇಕು. ಚೌಧರಿ ಹತ್ಯೆಗೆ ಆಡಳಿಕ ಮಂಡಳಿಯೇ ಕಾರಣ' ಎಂದು ನೌಕರರನ್ನೇ ಬೆಂಬಲಿಸಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಯ ವಿರುದ್ಧ ಇಟಲಿ ಕಂಪನಿ ಗ್ರೇಜಿಯಾನೋ ಟ್ರಾನ್ಸ್ ಮಿಸಿಯೋನಿ ಕಂಪನಿ ಕೆಂಡ ಕಾರಿತ್ತು. ಈಗ ಕಂಪನಿಯ ಒತ್ತಡಕ್ಕೆ ಮಣಿದು ಆಸ್ಕರ್ ಕ್ಷಮಾಪಣೆ ಕೇಳಿರುವುದಾಗಿ ಟಿವಿ ಚಾನಲ್ ಟೈಮ್ಸ್ ನೌ ವರದಿ ಮಾಡಿದೆ.

ಗ್ರೇಜಿಯಾನೋದ ಭಾರತದ ಘಟಕದ ನಿರ್ದೇಶಕ, ರಮೇಶ್ ಜೈನ್ ಅವರು ಆಸ್ಕರ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಈ ಹೇಳಿಕೆ ಭಾರತದಲ್ಲಿರುವ ಎಲ್ಲ ಕಂಪನಿಗಳಿಗೆ ಅನ್ವಯಿಸುತ್ತದೆ. ಈ ಅಸಂಬದ್ಧ ಹೇಳಿಕೆಗಾಗಿ ಆಸ್ಕರ್ ಕ್ಷಮಾಪಣೆ ಕೇಳಬೇಕೆಂದು ಎಲ್ಲ ಕಂಪನಿಗಳು ಆಗ್ರಹಿಸಬೇಕು. ಭಾರತದಲ್ಲಿ ಹಣಹೂಡಲು ಬರುವ ಕಂಪನಿಗಳು ಮತ್ತೊಮ್ಮೆ ಯೋಚಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತದ ಉದ್ಯಮಿಗಳ ವಾಣಿಜ್ಯ ಮಂಡಳಿಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಕೂಡ ಆಸ್ಕರ್ ಹೇಳಿಕೆಯನ್ನು ಖಂಡಿಸಿದ್ದರು.

ಹೆಚ್ಚಿನ ವೇತನ ನೀಡಬೇಕೆಂದು ಬೇಡಿಕೆಯಿಟ್ಟಿದ್ದ ನೌಕರರನ್ನು ಸಾರಾಸಗಟಾಗಿ ಗ್ರೇಜಿಯಾನೋ ಕಂಪನಿ ಕೆಲಸದಿಂದ ತೆಗೆದುಹಾಕಿತ್ತು. ಇದರಿಂದ ರೊಚ್ಚಿಗೆದ್ದಿದ್ದ 200ಕ್ಕೂ ಹೆಚ್ಚು ನೌಕರರು ಕಂಪನಿಯ ಸಿಇಓ ಮತ್ತಿತರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಚೌಧರಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಸಾಯಿಸಲಾಗಿತ್ತು. ಘಟನೆಯಲ್ಲಿ ಭಾಗವಹಿಸಿದ 130ಕ್ಕೂ ಹೆಚ್ಚು ನೌಕರರನ್ನು ದೊಂಬಿ ಎಬ್ಬಿಸಿದ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X