ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿಗೊಳಗಾದ ಚರ್ಚ್ ಪರಿಶೀಲಿಸಿದ ಕೇಂದ್ರ ತಂಡ

By Staff
|
Google Oneindia Kannada News

ಬೆಂಗಳೂರು, ಸೆ. 24 : ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರತಂಡ ಇಂದು ಬೆಂಗಳೂರಿನಲ್ಲಿ ದಾಳಿಗೊಳಗಾದ ಮರಿಯಣ್ಣನ ಪಾಳ್ಯ ಚರ್ಚ್ ಗೆ ತೆರಳಿ ಪರಿಶೀಲನೆ ನಡೆಸಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮುಖಂಡ ಎಂ.ಎಲ್.ಕುಮಾವತ್ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಮಂಗಳೂರಿನಲ್ಲಿನ ಚರ್ಚ್ ಗಳಿಗೆ ಭೇಟಿ ಪರಿಶೀಲನೆ ನಡೆಸಿದ ನಂತರ ರಾಜ್ಯ ಸರ್ಕಾರ ಚರ್ಚ್ ದಾಳಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು ಎಂದು ಹೇಳಿಕೆ ನೀಡಿತ್ತು. ಇಂದು ಕೂಡ ಮರಿಯಣ್ಣನ ಪಾಳ್ಯ ಚರ್ಚ್ ಪರಿಶೀಲನೆ ನಡೆಸಿ ಅದೇ ರಾಗವನ್ನು ಮುಂದುವರೆಸಿದೆ. ಗಲಭೆ ಮಾಡಿ ಅನಾಹುತವನ್ನು ಸೃಷ್ಟಿಸಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ನಾವು ತೃಪ್ತರಾಗುವ ಬದಲು ಹಲ್ಲೆಗೆ ಒಳಗಾದ ಜನರು ತಾವು ಸುರಕ್ಷಿತವಾಗಿ ಇದ್ದೇವೆ ಎಂಬ ಭಾವನೆ ಮೂಡಿದರೆ ಸಾಕು ಎಂದು ಎಂ.ಎಲ್. ಕುಮಾವತ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕುಮಾವತ್ ಹೇಳಿದರು. ಚರ್ಚ್ ಪರಿಶೀಲನೆ ನಂತರ ರಾಜ್ಯದ ಮುಖ್ಯಕಾರ್ಯದರ್ಶಿ ಸುಧಾಕರ್ ರಾವ್ ಜತೆಗೆ ಚರ್ಚೆ ನಡೆಸಿದ ಕೇಂದ್ರ ತಂಡ ಆನಂತರ ರಾಜಪಾಲರನ್ನು ಭೇಟಿ ಮಾಡಲ ರಾಜಭವನಕ್ಕೆ ತೆರಳಿತು.

ಆಚಾರ್ಯ ಪ್ರತಿಕ್ರಿಯೆ

ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿ ಚರ್ಚ್ ಪರಿಶೀಲನೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ. ಈಗಾಗಲೇ ರಾಜ್ಯ ಸರ್ಕಾರದಿಂದ ಚರ್ಚ್ ದಾಳಿಯ ವಿವರವಾದ ವರದಿಯನ್ನು ಸಲ್ಲಿಸಲಾಗಿದೆ. ಜತೆಗೆ ದಾಳಿ ತಡೆಯಲು ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಎಲ್ಲವನ್ನೂ ವರದಿಯಲ್ಲಿ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಹೆಚ್ಚಿನ ಮಾಹಿತಿಗಾಗಿ ರಾಜ್ಯ ಕೇಂದ್ರ ತಂಡ ಆಗಮಿಸಿದೆ. ರಾಜ್ಯ ಸರ್ಕಾರದ ವರದಿಯ ಜತೆಗೆ ಸಾಕ್ಷಾತ್ ವರದಿಗೆ ಕೇಂದ್ರ ಸರ್ಕಾರ ತನ್ನ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ಆಚಾರ್ಯ ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಲ್ಪಸಂಖ್ಯಾತರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲ ಎಂದು ಅಗತ್ಯಕ್ಕಿಂತ ಹೆಚ್ಚು ಪ್ರತಿಪಕ್ಷಗಳು ಬೊಬ್ಬೆಹಾಕಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

(ದಟ್ಸ್ ಕನ್ನಡ ವಾರ್ತೆ)

ಸಿಎಂ ಪದವಿಗೆ ಚ್ಯುತಿ ತಂದ ಯಡಿಯೂರಪ್ಪ
ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯಿದೆ ಜಾರಿ
ಚರ್ಚ್ ದಾಳಿ, ತುರ್ತು ಸಚಿವ ಸಂಪುಟ ಸಭೆಗೆ ಕರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X