ಮಸೀದಿ ಮೇಲ್ಛಾವಣೆ ಕುಸಿತ 12 ಜನಕ್ಕೆ ಗಾಯ
ಬೆಂಗಳೂರು, ಸೆ. 24 : ಮಸೀದಿಯ ಮೆಲ್ಛಾವಣೆ ಕುಸಿದ ಹಿನ್ನೆಲೆಯಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, 12 ಗಾಯಗೊಂಡಿರುವ ಘಟನೆ ನಗರದ ಪಾದರಾಯನಪುರದಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ.
ಇಂದು ನಸುಕಿನಜಾವ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಪಾದರಾಯನಪುರದಲ್ಲಿರುವ ಮಸೀದಿಗೆ 3000 ಸಾವಿರ ಪ್ರಾರ್ಥನೆಗೆ ಆಗಮಿಸಿದ್ದರು. ಪ್ರತಿ ಸಲ 600 ಜನ ಮಾತ್ರ ಪ್ರಾರ್ಥನೆಗೆ ಬರುತ್ತಿದ್ದರು, ಇಂದು ಅಗತ್ಯಕ್ಕಿಂತ ಹೆಚ್ಚು ಜನರು ಪ್ರಾರ್ಥನೆಗೆ ಬಂದಿದ್ದರಿಂದ ಭಾರ ತಡೆಯಲಾರದು ಕಟ್ಟಡ ಮೆಲ್ಛಾವಣೆ ಕುಸಿದಿದ್ದರಿಂದ ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ 12 ಜನರು ಗಾಯಗೊಂಡಿದ್ದಾರೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications