ಮತಾಂತರ ಪ್ರಕರಣ: ಉಡುಪಿ ಪೊಲೀಸ್ ವರದಿ

ಉಡುಪಿ, ಸೆ. 15: ದಿನಾಂಕ 14/09/08 ರಂದು ಬೆಳಿಗ್ಗೆ 11:15 ಗಂಟೆ ಸುಮಾರಿಗೆ ಮುದೂರು ಗ್ರಾಮದ ಮುದೂರು ಮೈದಾನದ ಸಮೀಪ ಮುದೂರು ಹಳ್ಳಿಹೊಳೆ ರಸ್ತೆಯ ಅಂಚಿನಲ್ಲಿರುವ ಮಿಷನ್ ಒನ್ ಮಿಲಿಯನ್ ಲೈಫ್ ಸೆಂಟರ್‌ಗೆ ಒಂದು ಮಾರುತಿ ಬಿಳಿ ಕಾರು ಮತ್ತು ಟ್ರಾಕ್ಸ್‌ನಲ್ಲಿ ಬಂದ 25-30 ವರ್ಷ ಪ್ರಾಯದ ಅಪರಿಚಿತ ಸುಮಾರು 10-20 ಮಂದಿ ವ್ಯಕ್ತಿಗಳು ಸಮಾನ ಉದ್ದೇಶದಿಂದ ಲೈಫ್ ಸೆಂಟರ್‌ಗೆ ಅಕ್ರಮ ಪ್ರವೇಶ ಮಾಡಿ ಪಿರ್‍ಯಾದಿದಾರರಲ್ಲಿ ನೀವು ಕ್ರಿಶ್ಟಿಯನ್ನರಾ ಎಂದು ಕೇಳಿ ನಾಳೆ ನೀವು ಇಲ್ಲಿ ಇರಬಾರದು ಇದ್ದರೆ ನಿಮ್ಮನ್ನು ಕೊಂದು ಹಾಕುತ್ತೇವೆ ಎಂದು ಪಿರ್‍ಯಾದಿಸಿ.ಎ. ಸುನೀಲ್ (30) ಅಂದೂರು ಗ್ರಾಮ ಎನ್.ಆರ್ ಪುರ ಚಿಕ್ಕಮಗಳೂರು ಇವರಿಗೆ ಬೆದರಿಕೆ ಹಾಕಿದ್ದಲ್ಲದೇ ಇವರ ಪೈಕಿ ಒಬ್ಬಾತ ಕೈಯಿಂದ ಪಿರ್‍ಯಾದಿಗೆ ಹೊಡೆದಿದ್ದು ಉಳಿದವರು ಅವರ ಕೈಯಲ್ಲಿದ್ದ ಮರದ ರೀಪಿನಿಂದ ಲೈಫ್ ಸೆಂಟರ್‌ನೊಳಗಡೆ ಇದ್ದ ಓನಿಡಾ ಟಿ.ವಿ. ಒಡೆದು, 2 ಫೈಬರ್ ಕುರ್ಚಿ ತುಂಡು ಮಾಡಿ ಗೋಡ್ರೇಜ್ ಗ್ಲಾಸ್, ಫೋನ್ ಒಡೆದು ಹಾಕಿ ಟೈಲರಿಂಗ್ ಮೇಷಿನ್ ಅಡ್ಡಕೆಡವಿ ಸುಮಾರು 25,000/ ದಷ್ಟು ನಷ್ಟವುಂಟು ಮಾಡಿರುವುದಾಗಿದೆ.

ಈ ಲೈಫ್ ಸೆಂಟರ್‌ನಲ್ಲಿದ್ದ 9 ಮಂದಿ ವಿದ್ಯಾರ್ಥಿಗಳಿಗೆ ಕ್ರಿಶ್ಟಿಯನ್ ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಬೋಧನೆ ಮಾಡುತ್ತಾರೆಂಬ ಇರಾದೆಯಿಂದ ಆರೋಪಿಗಳು ಈ ಕೃತ್ಯವನ್ನು ಮಾಡಿ ಮತೀಯ ಭಾವನೆಯನ್ನು ಕೆರಳಿಸಿದ್ದಾಗಿದೆ. ಈ ಸಂಬಂಧ ಕೊಲ್ಲೂರು ಠಾಣಾ ಅ.ಕ್ರ ನಂಬ್ರ 54/08 ಕಲಂ 143,147,148,448,427, 323,506,153 (ಎ) ಜತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
****
ಕೇಸ್ ನಂ. 2:
ದಿನಾಂಕ 14/09/2008 ರಂದು ರಾತ್ರಿ ಸುಮಾರು 09:30ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕಟ್ಕೆರೆ ಎಂಬಲ್ಲಿರುವ ಕಾರ್ಮೆಲ್ ಆಶ್ರಮ ಚರ್ಚ್‌ಗೆ ಯಾರೋ ದುಷ್ಕರ್ಮಿಗಳು ಕ್ರಿಶ್ಚಿಯನ್ ಮತಕ್ಕೆ ಅವಮಾನ ಉಂಟಾಗುವ ರೀತಿಯಲ್ಲಿ ಪೂಜಾ ಸ್ಥಾನದ ಹೊರಗಡೆ ಇರುವ ಮರಿಯಮ್ಮನ ಮೂರ್ತಿ ಹಾಗೂ ಬಾಲಯೇಸುವಿನ ಮೂರ್ತಿಗೆ ಕಲ್ಲುಗಳನ್ನು ಬಿಸಾಡಿ ಅದರ ಗ್ಲಾಸು ಹಾಗೂ ಮೂರ್ತಿಯನ್ನು ಜಖಂಗೊಳಿಸಿ ಸುಮಾರು 15,000/.ರೂ ನಷ್ಟ ಉಂಟು ಮಾಡಿರುತ್ತಾರೆ ಎನ್ನುದಾಗಿ ಫಾದರ್ ಬೋನಿ ಫಾಸ್ ಡಿಸೋಜಾ ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು ಪಿರ್‍ಯಾದಿ ನೀಡಿರುತ್ತಾರೆ. ಈ ಸಂಬಂಧ ಕುಂದಾಪುರ ಠಾಣಾ ಅ.ಕ್ರ. 245/08 ಕಲಂ :295,427 ಐ.ಪಿ.ಸಿ.ರಂತೆ ಪ್ರಕರಣ ದಾಖಲಾಗಿರುತ್ತದೆ.

*****
ಕೇಸ್ ನಂ.3
ದಿನಾಂಕ: 14/09/08 ರಂದು 10:30 ಗಂಟೆಯ ಸಮಯ ಶಿರೂರು ಗ್ರಾಮದ ನೀರ್‍ಗದ್ದೆ ಎಂಬಲ್ಲಿ ಸುಮಾರು ೨೫ ಜನ ಅಪರಿಚಿತ ದುಷ್ಕರ್ಮಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಕೈಯಲ್ಲಿ ಕತ್ತಿ ಮತ್ತು ದೊಣ್ಣೆಯನ್ನು ಹಿಡಿದುಕೊಂಡು ಚರ್ಚ್‌ನ್ನು ನಾಶ ಮಾಡುವ ಮತ್ತು ಪಿರ್‍ಯಾದಿ ಕೆ. ಎ ಅಬ್ರಹಾಂ(44), ತಂದೆ: ಮಾಣಿ ಅಂತ್ರಾಯಸ್, ವಾಸ: ಲೈಫ್ ಮತ್ತು ಲೈಟ್ ಮಿನಿಸ್ಟ್ರೀಸ್, ನೀರ್‍ಗದ್ದೆ, ಶಿರೂರು, ಶಿರೂರು ಗ್ರಾಮ, ಕುಂದಾಪುರ ತಾಲೂಕು ಇವರ ಬಾಬ್ತು ಲೈಫ್ ಮತ್ತು ಲೈಟ್ ಮಿನಿಸ್ಟ್ರೀಸ್ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನೆಯನ್ನು ನಿಲ್ಲಿಸುವ ಉದ್ದೇಶದಿಂದ ಚರ್ಚ್‌ನ ವಠಾರಕ್ಕೆ ಅಕ್ರಮ ಪ್ರವೇಶ ಮಾಡಿ ಚರ್ಚ್‌ಗೆ ಮತ್ತು ಪಿರ್‍ಯಾದಿದಾರರ ವಾಸ್ತವ್ಯದ ಮನೆಗೆ ಹಾಗೂ ಮಾರುತಿ ಓಮ್ನಿ ಕಾರು ನಂ: ಕೆಎ-೨೯-ಎನ್-೪೮೫ ನೇ ಯದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿ, ಚರ್ಚ್‌ನ, ಮನೆಯ ಗ್ಲಾಸ್, ಡ್ರಮ್ ಸೆಟ್, ಸಿಸ್ಟಮ್, ಕುರ್ಚಿ, ಟೇಬಲ್ ಹಾಗೂ ಹೀರೋ ಹೋಂಡಾ ಮೋಟಾರು ಸೈಕಲ್ ನಂಬರ್ : ಕೆಎ-೩೦-ಜೆ-೩೯೩೭ ನೇ ಯದನ್ನು ಹಾನಿಗೊಳಿಸಿ ಪಿರ್‍ಯಾದಿದಾರರಿಗೆ ಸುಮಾರು 4,00,000/ ರೂ ನಷ್ಟವುಂಟು ಮಾಡಿದ್ದಲ್ಲದೆ, ಪಿರ್‍ಯಾದಿದಾರರಿಗೆ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿದೆ.

ಈ ಬಗ್ಗೆ ಬೈಂದೂರು ಠಾಣಾ ಮೊ.ನಂ : 162/08 ಕಲಂ: 143, 147, 148, 447, 436, 427,295,324 ಜೊತೆಗೆ 149ಐ.ಪಿ.ಸಿ ಯಂತೆ ಪ್ರಕರಣ ದಾಖಲು ಮಾಡಲಾಗಿದೆ.

*****
ಕೇಸ್ ನಂ. 4
ದಿನಾಂಕ 14/09/08 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ನ್ಯೂಲೈಫ್ ಫೆಲೋಶಿಪ್, ಕೃಷ್ಣಾಕೃಪಾ ಕಾಂಪ್ಲೆಕ್ಸ್ ಎಂಬಲ್ಲಿ ಎಂದಿನಂತೆ ಪ್ರಾರ್ಥನೆ ನಡೆಯುತ್ತಿರುವ ವೇಳೆಯಲ್ಲಿ ಸುಮಾರು 15-20 ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಅಕ್ರಮ ಪ್ರವೇಶ ಮಾಡಿ ಪ್ರಾರ್ಥನ ಮಂದಿರದ ಕಿಟಕಿಯ ಗಾಜು ಟ್ಯೂಬ್ ಲೈಟ್ ಪ್ಲಾಸ್ಟಿಕ್ ಕುರ್ಚಿ ಕೀ ಬೋರ್ಡ್ ಡ್ರಮ್ ಸೆಟ್ ಮೈಕ್ ವಗೈರೆ ಸೊತ್ತುಗಳನ್ನು ಜಖಂಗೊಳಿಸಿ ಸುಮಾರು 1,50,000/-ರೂ. ನಷ್ಟು ನಷ್ಟವುಂಟು ಮಾಡಿರುವುದಾಗಿದೆ. ಹಾಗೂ ಈ ರೀತಿ ಏಕೆ ಗಲಾಟೆ ಮಾಡುತ್ತೀರಿ ಎಂದು ಕೆಲವರು ಕೇಳಿದಾಗ ಅಲ್ಲಿಯೇ ಇರುವ ಕುರ್ಚಿಯ ತುಂಡಾದ ಭಾಗಗಳಿಂದ ಹೊಡೆದು ಸುಗುಣ ವಿನ್ಸೆಂಟ್ ಸುಮಿತ್ರಾ ಹಾಗೂ ಇತರರಿಗೆ ರಕ್ತಗಾಯಗೊಳಿಸಿರುವುದಾಗಿದೆ.

ಇಲ್ಲಿ ನ್ಯೂ ಲೈಫ್ ಪ್ರಾರ್ಥನಾ ಮಂದಿರ ನಡೆಸಿದರೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆಪಾದಿತರ ಪೈಕಿ ಕೆಲವು ಜನರು ಕೆಎ-20-A 2007 ಆಟೋರಿಕ್ಷಾ ಮತ್ತು KA-20-Q-3788ನೇ ಮೋಟಾರ್ ಸೈಕಲ್‌ನಲ್ಲಿ ತಕ್ಷೀರು ನಡೆಸಿ ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅ.ಕ್ರ 309/08ಕಲಂ: 143,147,295,448,324,506,427,ಜೊತೆಗೆ 149 ಐಪಿಸಿ .ಯಂತೆ ಪ್ರಕರಣ ದಾಖಲು ಮಾಡಲಾಗಿದೆ.

ಸುದ್ದಿ ಕೃಪೆ: ಉಡುಪಿ, ಕುಂದಾಪುರ,ಕೊಲ್ಲೂರು, ಬೈಂದೂರು ಪೊಲೀಸ್ ಠಾಣೆ

ಪೂರಕ ಓದಿಗೆ:
ಮಂಗಳೂರು ಮುಂದುವರೆದ ಉದ್ವಿಗ್ನ ಪರಿಸ್ಥಿತಿ
ಚರ್ಚ್ ಮೇಲೆ ದಾಳಿ: ಮಂಗಳೂರಿಗೆ ಸಿಎಂ ಭೇಟಿ
ಮತಾಂತರ : ಮಂಗಳೂರು ಉದ್ವಿಗ್ನ, ನಿಷೇಧಾಜ್ಞೆ ಜಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+