ದಿಲ್ಲಿ ಸ್ಫೋಟ : ಬಿಜಾಪುರದಲ್ಲಿ ಶಂಕಿತನ ಬಂಧನ

ಬಿಜಾಪುರ, ಸೆ. 15 : ಕಳೆದ ಶನಿವಾರ ದಿಲ್ಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ದೆಹಲಿಯ ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ವಿದ್ಯಾರ್ಥಿಯ ಚಲನವಲನದ ಬಗ್ಗೆ ಮೊದಲೇ ಕೇಂದ್ರ ವಿಚಕ್ಷಣಾ ದಳದವರು ಮಾಹಿತಿ ಸಂಗ್ರಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಸಿಮಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಹಿಂದೆ ಅದ್ನಾನ್ ಎಂಬುವವರನ್ನು ಬಂಧಿಸಲಾಗಿತ್ತು. ಅದಲ್ಲದೇ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಒಬ್ಬ ವೈದ್ಯ ಹಾಗೂ ಟ್ರಾವೆಲ್ ಏಜೆಂಟ್ ನನ್ನು ವಿಚಾರಣೆಗೊಳಪಡಿಸಿ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕಳೆದ ಶನಿವಾರ ದಿಲ್ಲಿಯಲ್ಲಿ ವಿವಿಧ 5 ಕಡೆ ಸರಣಿ ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ 31 ಜನ ಅಸುನೀಗಿದ್ದು. 150 ಕ್ಕೂ ಹೆಚ್ಚು ಗಾಯಗೊಂಡಿರುವ ಪ್ರಕರಣ ನಡೆದಿದೆ. ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಸಿಮಿ ಸಂಘಟನೆ ಕಾರ್ಯಕರ್ತರು ವಿಧ್ವಂಸಕ ಕೃತ್ಯದ ಹೊಣೆ ಹೊತ್ತುಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

ದಿಲ್ಲಿ ಸ್ಫೋಟ: ನಾಲ್ಕು ಜೀವಂತ ಬಾಂಬ್ ನಿಷ್ಕ್ರಿಯ
ದಿಲ್ಲಿ ಸ್ಫೋಟ: ಸಂಚಿನ ರುವಾರಿ ತಂತ್ರಜ್ಞ ತಾಖೀರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+