'ಹೊಗೆ' ಜಂಟಿ ಸಮೀಕ್ಷೆಗೆ ಯಡಿಯೂರಪ್ಪ ಆಗ್ರಹ
ನವದೆಹಲಿ,ಆ.13: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಜಂಟಿ ಸಮೀಕ್ಷೆ ನಡೆಸುವವರೆಗೂ ಹೊಗೇನಕಲ್ ಯೋಜನೆ ಪ್ರಾರಂಭಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ಹೊಗೇನಕಲ್ ಯೋಜನೆಯಲ್ಲಿ ಗಡಿ ವಿವಾದವೂ ಸೇರಿದೆ ಆದಕಾರಣ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಿದರೆ ಮಾತ್ರ ಸಮಸ್ಯೆಯನ್ನು ಬಗೆಹರಿಸಬಹುದು. ಎಲ್ಲ ಪಕ್ಷಗಳು ತಮ್ಮ ಒಪ್ಪಿಗೆ ಸೂಚಿಸಿದರೆ ಸರ್ವ ಪಕ್ಷಗಳ ನಿಯೋಗ ಕರೆತರಲು ಸಿದ್ಧವಿರುವುದಾಗಿ ಅವರು ತಿಳಿಸಿದರು.
ಮಹಾರಾಷ್ಟ್ರದ ಕೊಯ್ನಾ ಆಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿರುವುದರಿಂದ ಬೆಳಗಾವಿ,ವಿಜಾಪುರ ಜಿಲ್ಲೆಗಳ ಕೆಲವು ಪ್ರದೇಶಗಳು ಮುಳುಗಡೆಯಾಗಿವೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಜತೆ ಮಾತನಾಡಿದ್ದೇನೆ. ಆಣೆಕಟ್ಟೆಯಿಂದ ನೀರನ್ನು ಹಂತಹಂತವಾಗಿ ಹೊರಬಿಡುವಂತೆ ಸೂಚಿಸಿರುವುದಾಗಿ ಯಡಿಯೂರಪ್ಪ ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)
ಹೊಗೆ ಹಗೆ ನಿಲ್ಲಿಸಲು ದೆಹಲಿ ತನಕ ದೂರು
ಹೊಗೇನಕಲ್ ವಿವಾದ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ












Click it and Unblock the Notifications