ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಲ್ ಫೌಂಡೇಷನ್‌ನಿಂದ ಬುಡಕಟ್ಟು ಜನಾಂಗಕ್ಕೆ ಉಚಿತ ಶಿಕ್ಷಣ

By Staff
|
Google Oneindia Kannada News

Free education to tribals in Karnataka by Ekal Vidyalayaಬೆಂಗಳೂರು, ಆ. 8 : ಏಕಲ್ ವಿದ್ಯಾಲಯ ಫೌಂಡೇಷನ್ ಭಾರತದಾಧ್ಯಂತ 26 ಸಾವಿರ ಹಳ್ಳಿಗಳ ಸುಮಾರು ಎಂಟು ಲಕ್ಷ ಬುಡಕಟ್ಟು ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಪ್ರಶಸಾರ್ಹ ಕೆಲಸ ಮಾಡುತ್ತಿದೆ. ಬುಡಕಟ್ಟು ಜನಾಂಗದಲ್ಲಿ ಅನಕ್ಷರತೆಯನ್ನು 2011ರೊಳಗೆ ತೊಡೆದು ಹಾಕಲು ಈ ಸಂಸ್ಥೆ ಪಣ ತೊಟ್ಟಿದೆ. ಅಲ್ಲದೆ ಭಾರತದ ಸುಮಾರು 1ಲಕ್ಷ ಹಳ್ಳಿಗಳಲ್ಲಿ ಏಕಲ್ ವಿದ್ಯಾಲಯಗಳನ್ನು ತೆರೆಯುವ ಗುರಿಯನ್ನೂ ಹೊಂದಿದೆ.

ಏಕಲ್ ವಿದ್ಯಾಲಯ ಪೌಂಡೇಷನ್‌ನ ಶಾಲೆಗಳಲ್ಲಿ ಕೇವಲ ಪ್ರಾಥಮಿಕ ಹಂತದ ಶಿಕ್ಷಣ ಮಾತ್ರ ಬೋಧಿಸದೆ ಆರೋಗ್ಯ ಸಂಬಂಧಿ ಶಿಕ್ಷಣ, ಅಭಿವೃದ್ದಿ ಶಿಕ್ಷಣ, ಸಮಾಜದಲ್ಲಿ ಉನ್ನತಿ ಹೊಂದದ ಜನತೆಯನ್ನು ಮುನ್ನಡೆಸಲು ಅಗತ್ಯ ಮಾರ್ಗದರ್ಶನ ನೀಡುತ್ತಿದೆ. ದೇಶ ವಿದೇಶದ ಹಲವಾರು ದಾನಿಗಳಿಂದ ಎಕಲ್ ವಿದ್ಯಾಲಯ ಶಾಲೆಗಳು ನಡೆಯುತ್ತಿದ್ದು ಪ್ರತಿ ಶಾಲೆಗೆ ವರ್ಷಕ್ಕೆ ಕೇವಲ 16 ಸಾವಿರ ರೂಪಾಯಿಗಳು ಖರ್ಚಾಗುತ್ತಿದೆ ಎಂದು ಎಸ್ಸೆಲ್ ಗ್ರೂಪ್ ಹಾಗೂ ಜೀ ನೆಟ್‌ವರ್ಕನ ಅಧ್ಯಕ್ಷ ಸುಭಾಷ್‌ಚಂದ್ರ ಪತ್ರಿಕಾಹೇಳಿಕೆಯಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಎಕಲ್ ಪೌಂಡೇಷನ್ 759 ಶಾಲೆಗಳನ್ನು ತೆರೆದಿದೆ. ಇವುಗಳಲ್ಲಿ ಚಾಮರಾಜನಗರದಲ್ಲಿ ಅತಿಹೆಚ್ಚು ಅಂದರೆ 174, ಗುಲ್ಬರ್ಗಾದಲ್ಲಿ 149, ಬಳ್ಳಾರಿಯಲ್ಲಿ 147, ಖಾನಾಪುರದಲ್ಲಿ 118, ಬೀದರ್‌ನಲ್ಲಿ 96 ಮತ್ತು ಮೈಸೂರಿನಲ್ಲಿ 75 ಶಾಲೆಗಳನ್ನು ತೆರೆದಿದೆ.

ಸಾಂಪ್ರದಾಯಿಕ ವಿಷಯಗಳಾದ ಇತಿಹಾಸ, ಭೂಗೋಳ, ವಿಜ್ಞಾನ ಮತ್ತು ಸಾಹಿತ್ಯ ಮುಂತಾದ ವಿಷಯದಲ್ಲಿಯೂ ಬುಡಕಟ್ಟು ಜನಾಂಗದ ಮಕ್ಕಳಿಗೆ ಆಸಕ್ತಿ ಬರುವಂತೆ ಏಕಲ್ ವಿದ್ಯಾಲಯ ಫೌಂಡೇಷನ್ ತನ್ನ ಶಿಕ್ಷಣ ಪದ್ದತಿಯಲ್ಲಿ ಸ್ಥಳೀಯ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ, ಆಯಾ ಪ್ರದೇಶದ ಕೃಷಿ ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಂಡು ಶಾಲೆಯ ಚಟುವಟಿಕೆಗಳನ್ನು ನಿರ್ಧರಿಸಲಾಗಿರುತ್ತದೆ. ಹೆಚ್ಚಿನ ಶಿಕ್ಷಣ ಪಡೆಯಲು ಅನುಕೂಲವಾಗುವಂತಹ ಪ್ರಾಥಮಿಕ ಶಿಕ್ಷಣ ಹಾಗೂ ವ್ಯಕ್ತಿತ್ವ ಬೆಳವಣಿಗೆಯ ಪಾಠಗಳನ್ನು ಈ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಳಿಗೆ : www.ekalindia.org, ಬೆಂಗಳೂರಿನಲ್ಲಿನ ಸಂಪರ್ಕ ವ್ಯಕ್ತಿ : ಗಣೇಶ್ ಶೆಣೈ, ದೂರವಾಣಿ : 09441210648, ಇಮೇಲ್ ವಿಳಾಸ : [email protected]

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X