ಚಾಮಲಾಪುರ ಸ್ಥಾವರ ಸ್ಪಾಪನೆ ಖಚಿತ : ಯಡಿಯೂರಪ್ಪ
ಶಿವಮೊಗ್ಗ, ಆ. 7 : ಮೈಸೂರಿನ ಚಾಮಲಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ವಿದ್ಯುತ್ ಸ್ಥಾವರವನ್ನು ಕೈಬಿಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಮತ್ತು ಅಂಬ್ಲಿಗೋಳ ಜಲಾಶಯಗಳಿಗೆ ಬುಧವಾರ ಬಾಗಿನ ಅರ್ಪಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯೊಜನೆಗೆ ವಿರೋಧ ವ್ಯಕ್ತಪಡಿಸಿರುವ ಪರಿಸರವಾದಿಗಳು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲಾಗುವುದು ಎಂದರು. ನೀರಾವರಿ ಯೋಜನೆಗಳ ಅನುಷ್ಠಾನದ ಜತೆಗೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯ ವಿದ್ಯುತ್ ಉತ್ಪಾದನೆಗೆ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದ್ದು, ಯಾವುದೇ ಯೋಜನೆಯನ್ನು ಕೈಬಿಡುವ ಯೋಚನೆ ಸರ್ಕಾರ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚಾಮಲಾಪುರ ಯೋಜನೆ ರದ್ದುಪಡಿಸುವ ಕುರಿತು ಸರ್ಕಾರ ಯಾವುದೇ ಘೋಷಣೆ ಹೊರಡಿಸಿಲ್ಲ. ಪರಿಸರಕ್ಕೆ ದಕ್ಕೆಯಾಗದಂತೆ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಯಡಿಯೂರಪ್ಪ ವಿವರಿಸಿದರು. ರಾಜ್ಯಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ಖಂಡಿಸಿದ ಅವರು, ಪ್ರತಿ ಹಂತದಲ್ಲಿಯೂ ಅಡ್ಡಗಾಲಾಗಿರುವ ಕೇಂದ್ರ ಸರ್ಕಾರದ ಧೋರಣೆಯಿಂದ ರಾಜ್ಯದ ಅನೇಕ ಯೋಜನೆಗಳು ಕುಂಠಿತಗೊಂಡಿವೆ ಎಂದು ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)
ಚಾಮಲಾಪುರ ಯೋಜನೆ ಕೈಬಿಡಿ ಅಥವಾ ಸ್ಥಳಾಂತರಿಸಿ
ಕರ್ನಾಟಕದಿ ಹರಿಯಲಿದೆ ಛತ್ತೀಸ್ ಗಢದ ವಿದ್ಯುತ್
ಶುಕ್ರವಾರ(ಜು. 25)ದಿಂದ ಲೋಡ್ ಶೆಡ್ಡಿಂಗ್ ಆರಂಭ












Click it and Unblock the Notifications