ಧೋನಿ ಶಾಲೆಯಲ್ಲಿ 'ಖೇಲ್ ರತ್ನ' ಸಂಭ್ರಮ
ರಾಂಚಿ, ಆ.5: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಏಕದಿನ ಕ್ರಿಕೆಟ್ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಭಾಜನರಾಗಿರುವುದು ಡಿಎವಿ ಶಾಲೆಯಲ್ಲಿ ಎಲ್ಲಿಲ್ಲದ ಸಂಭ್ರಮ ಉಂಟು ಮಾಡಿದೆ. ಏಕೆಂದರೆ ಧೋನಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬ.ಈ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸಲು ಶಾಲೆಯಲ್ಲಿ ಮಂಗಳವಾರ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಯಿತು. ಧೋನಿಗೆ ಶುಭ ಕೋರಿ ರಾಂಚಿಯ ಪ್ರಸಿದ್ಧ ದೇವಾಲಯದಲ್ಲಿ ಇಂದು ಅರ್ಚನೆ ಸಹ ಮಾಡಿಸಲಾಯಿತು. ತೆಂಡೂಲ್ಕರ್ ನಂತರ ಈ ಪ್ರಶಸ್ತಿಗೆ ಭಾಜನರಾಗಿರುವ ಎರಡನೇ ಕ್ರಿಕೆಟರ್ ಧೋನಿ. ಖೇಲ್ ರತ್ನ ಪ್ರಶಸ್ತಿ ಪಡೆಯುವ ಎಲ್ಲ ಅರ್ಹತೆಗಳೂ ಧೋನಿಗೆ ಇದ್ದವು. ಅವರಿಗೆ ಈ ಪ್ರಶಸ್ತಿ ಬಂದಿರುವ ಕಾರಣ ಇಡೀ ಜಾರ್ಖಂಡ್ ರಾಜ್ಯವೇ ಸಂಭ್ರಮಿಸುತ್ತಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಮಧು ಕೋಡಾ ಪ್ರತಿಕ್ರಿಯಿಸಿದ್ದಾರೆ.
ಇಂದು ಶಾಲೆಯ ಕ್ರೀಡಾ ವಿಭಾಗದೊಂದಿಗೆ ಈ ಸಂತೋಷದ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎನ್ನುತ್ತಾರೆ ಡಿಎವಿ ಶಾಲೆಯ ಕ್ರೀಡಾ ಶಿಕ್ಷಕ ರಿಷಬ್ ಬ್ಯಾನರ್ಜಿ. ಈ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ನನಗಂತೂ ತುಂಬಾ ಹೆಮ್ಮೆ ಅನ್ನಿಸುತ್ತಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪಡೆಯುವ ಎಲ್ಲ ಸಾಮರ್ಥ್ಯಗಳು ಧೋನಿಗೆ ಇತ್ತು ಎನ್ನುತ್ತಾರೆ ಡಿಎವಿ ಶಾಲೆಯ ವಿದ್ಯಾರ್ಥಿ ಸಂಜೀತ್.
(ದಟ್ಸ್‌ಕನ್ನಡ ಕ್ರೀಡಾವಾರ್ತೆ)
ಧೋನಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ












Click it and Unblock the Notifications