ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರತ್ ನಲ್ಲಿ ಇನ್ನೊಂದು ಸಜೀವ ಬಾಂಬ್ ಪತ್ತೆ

By Staff
|
Google Oneindia Kannada News

ಅಹಮದಾಬಾದ್, ಜು. 31 : ಬೆಂಗಳೂರು, ಅಹಮದಾಬಾದ್ ಮತ್ತು ಸೂರತ್ ನಲ್ಲಿ ಹೂತಿಡಲಾಗಿದ್ದ ಸಜೀವ ಬಾಂಬ್ ಗಳನ್ನು ಆಂಧ್ರಪ್ರದೇಶದ ಕಂಪನಿಯೊಂದರ ಮೂಲಕ ಸರಬರಾಜು ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳದ ಸಮಗ್ರ ವರದಿಯನ್ನು ಆಧರಿಸಿ ತನಿಖಾ ತಂಡ ಈ ನಿರ್ಧಾರಕ್ಕೆ ಬಂದಿದೆ. ಹಾಗೆಯೇ ಜೀವಂತ ಬಾಂಬ್ ಹಾವಳಿ ಇಂದು ಕೂಡಾ ಮುಂದುವರೆದಿದ್ದು, ಅಂಕಲೇಶ್ವರ್ ಎಂಬಲ್ಲಿ ಇನ್ನೊಂದು ಸಜೀವ ಬಾಂಬ್ ನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಸ್ಥಾನದ ಮೂಲಕವೂ ಈ ಬಾಂಬ್ ಗಳು ಸರಬರಾಜು ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅಧಿಕೃತವಾಗಿ ಸ್ಫಷ್ಟಪಡಿಸಿಲ್ಲ, ಆದರೆ ರಾಜಸ್ಥಾನದಲ್ಲಿ ಅಲ್ಲಿಯ ಸರ್ಕಾರ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಿದೆ. ಆದರೆ ಮಹತ್ವದ ವಿಷಯವನ್ನು ಕಲೆ ಹಾಕಿರುವ ಪೊಲೀಸರು, ನಾವಿ ಮುಂಬೈಗೆ ಸೇರಿದ ಕಾರ್ ವೊಂದನ್ನು ಕಳ್ಳತನ ಮಾಡಿಕೊಂಡು ಆಂಧ್ರಪ್ರದೇಶದ ಕಂಪನಿಯೊಂದರಿಂದ ಪುಣೆ ಮೂಲಕ ರಾಜಸ್ತಾನ ಮತ್ತು ಗುಜರಾತಿಗೆ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸಲಾಗಿದೆ ಎನ್ನುವು ಅಂಶ ಸಿಕ್ಕಿದೆ.

ಆದರೆ ಕಾರ್ ಡ್ರೈವರ್ ನ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಸ್ಫೋಟಕಗಳನ್ನು ಸಾಗಿಸಿದ ನಂತರ ಕಾರನ್ನು ಸ್ಫೋಟಿಸುವ ತಂತ್ರ ರೂಪಿಸಲಾಗಿತ್ತು. ಆದರೆ ಪೊಲೀಸರ ಸಮಯಪ್ರಜ್ಞೆಯಿಂದ ಸ್ಫೋಟಕ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆದೆರ ಕಾರಿನ ನಂಬರ್ ಪ್ಲೇಟ್ ನ್ನು ಬದಲಾಯಿಸಲಾಗಿದೆ. ಭಾರತ ವಿವಿಧೆಡೆ ನಡೆಸಿರುವ ವಿಧ್ವಂಸಕ ಕೃತ್ಯಗಳ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಅಹಮದಾಬಾದ್ ಮತ್ತು ರಾಜಸ್ತಾನ ಪೊಲೀಸರು ಹೆಚ್ಚಿನ ಮಾಹಿತಿಗೆ ತನಿಖೆ ಮುಂದುವರೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಸೂರತ್ : ಮತ್ತೆ ಮೂರು ಜೀವಂತ ಬಾಂಬ್ ಪತ್ತೆ
ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಶ್ವಾನದ್ದೇ ಮುಖ್ಯಪಾತ್ರ
ಉಗ್ರರ ಮುಂದಿನ ಗುರಿ ಚೆನ್ನೈ, ಕೊಲ್ಕತ್ತಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X