ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ವಿಶಿಷ್ಟ ಪರಿಸರ ಜಾಗೃತಿ ಕಾರ್ಯಕ್ರಮ

By Staff
|
Google Oneindia Kannada News

ಬೆಂಗಳೂರು, ಜು.31: ಪರಿಸರ ಮತ್ತು ಅರಣ್ಯ ಸಚಿವಾಲಯ ರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ 2008-09 ನೇ ಸಾಲಿನಲ್ಲಿ 'ಹವಾಮಾನ ಬದಲಾವಣೆ' ಎಂಬ ವಿಷಯದ ಅಡಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಸಿ ನೆಡುವ ಕಾರ್ಯಕ್ರಮ, ಗಾಳಿ ಮತ್ತು ಸೌರಶಕ್ತಿಯ ಬಳಕೆ, ನೀರಿನ ಆಕರಗಳ ಪುನರ್ ಸ್ಥಾಪನೆ ಮತ್ತು ನಿರ್ವಹಣೆ, ತರಿ ಭೂಮಿಯ ಸಂರಕ್ಷಣೆ, ಜೀವ ವೈವಿಧ್ಯದ ಸಂರಕ್ಷಣೆಯಲ್ಲಿ ಜನ ಸಮುದಾಯದ ಪಾತ್ರ, ಘನತ್ಯಾಜ್ಯ ನಿರ್ವಹಣೆ, ಮುನಿಸಿಪಲ್ ಕಸ, ಆಸ್ಪತ್ರೆ ಕಸ ಹಾಗೂಪ್ಲಾಸ್ಟಿಕ್ ತ್ಯಾಜ್ಯ, ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ನಿಟ್ಟಿನಲ್ಲಿ ನಮ್ಮ ಜೀವನಶೈಲಿ ಹಾಗೂ ನಡವಳಿಕೆಯಲ್ಲಿ ಬದಲಾವಣೆ, ಹವಾಮಾನ ಬದಲಾವಣೆ ಹಾಗೂ ಮಾಧ್ಯಮ, ತ್ಯಾಜ್ಯದ ಪುನರ್ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ಕೇಂದ್ರ ವಿಷಯದಡಿ ಸಾರ್ವಜನಿಕ ಸಮುದಾಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ರಾಜ್ಯ ಸರಕಾರದ ಇಲಾಖೆಗಳು, ನೋಂದಾಯಿತ ವೃತ್ತಿಪರ ಸಂಸ್ಥೆಗಳು, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರತ ಸಂಸ್ಥೆಗಳಿಂದ ಸಹಾಯಾನುದಾನಕ್ಕಾಗಿ ಪ್ರಸ್ತಾವನೆ ಆಹ್ವಾನಿಸಲಾಗಿದೆ.

ಪ್ರಸ್ತಾವನೆಯು ಕಡ್ಡಾಯವಾಗಿ ಕಾರ್ಯಭಾಗ ಅಂಶವನ್ನು ಒಳಗೊಂಡಿರಬೇಕಿದ್ದು, ಪರಿಸರ ಉನ್ನತೀಕರಣ ಮತ್ತು ಪ್ರಯೋಜನವು ಸಮುದಾಯಕ್ಕೆ ದೊರೆಯುವಂತಿರಬೇಕು. ಕರ್ನಾಟಕದಲ್ಲಿ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನವನ್ನು ಸಂಘಟಿಸಲು ರಾಜ್ಯ ವಿಜ್ಞಾನ ಪರಿಷತ್ತು ಸ್ಥಳೀಯ ಸಂಪನ್ಮೂಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆಸಕ್ತ ಸಂಸ್ಥೆಗಳು ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದಲ್ಲಿ ಭಾಗವಹಿಸುವವರು ನಿಯಮಾವಳಿಗಳು ಮತ್ತು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಆ.25ರೊಳಗೆ ಸಲ್ಲಿಸಬೇಕು.

ಗೌರವ ಕಾರ್ಯದರ್ಶಿ,
ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ,
ನಂ.24/2 ಮತ್ತು 24/3, 21ನೇ ಮುಖ್ಯರಸ್ತೆ,
ಬನಶಂಕರಿ 2ನೇ ಹಂತ,
ಬೆಂಗಳೂರು-70.
ದೂರವಾಣಿ:080- 26719639
ಇಮೇಲ್: [email protected]

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X