ಸೂರತ್ ನಲ್ಲಿ 10 ಜೀವಂತ ಬಾಂಬ್ ಗಳು ಪತ್ತೆ
ಸೂರತ್, ಜು. 29 : ಸೂರತ್ ನಗರ ಇಂದು ಅಕ್ಷರಶಃ ಭಯಾನಕ ಸ್ಥಿತಿಯನ್ನು ಎದುರಿಸುತ್ತಿದೆ. ಬೆಳಗಿನಿಂದ ಭಾರಿ ಕಾರ್ಯಾಚರಣೆ ನಡೆಸಿದ ಪೊಲೀಸರು 10 ಜೀವಂತ ಬಾಂಬ್ ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ನಾಲ್ಕು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಇನ್ನು ಆರು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ಸಾಗಿದೆ. ಈ ಮೂಲಕ ಮತ್ತೊಂದು ಅನಾಹುತವನ್ನು ತಪ್ಪಿಸುವಲ್ಲಿ ಪೊಲೀಸರು ಸ್ವಲ್ಪ ಮಟ್ಟಿಗೆ ಯಶ ಕಂಡಿದ್ದಾರೆ.
ಇದೀಗ ಸಿಕ್ಕಿರುವ ಹತ್ತು ಬಾಂಬ್ ಗಳು ನಗರದ ಜನನಿಬಿಡ ಪ್ರದೇಶವಾದ ವರಾಚಾ ಪ್ರದೇಶದಲ್ಲಿ ದೊರೆಕಿವೆ. ಬೆಳಗ್ಗೆ ಕೇವಲ ಒಂದು ಬಾಂಬ್ ಸಿಕ್ಕಿದ್ದ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿಗೆ ಹತ್ತು ಬಾಂಬ್ ಗಳು ಸಿಕ್ಕಿವೆ. ಭಾರಿ ವಿನಾಶಕ್ಕೆ ಕೈಹಾಕಿರುವ ಉಗ್ರರು ರಾಜ್ಯವನ್ನೇ ನರಕಸದೃಶ ಮಾಡುವ ಹುನ್ನಾರ ಇದಾಗಿದೆ. ಗೋಧ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ಈ ಕೃತ್ಯ ಎಂದು ಹೇಳಿಕೊಂಡಿರುವ ಉಗ್ರರು ಇನ್ನಷ್ಟು ಬಾಂಬ್ ಗಳನ್ನು ಸ್ಫೋಟಿಸುವ ಬೆದರಿಕೆಯನ್ನು ಒಡ್ಡಿದ್ದಾರೆ.
ಸೂರತ್ ನಗರದ ವರಾಚಾ ಪ್ರದೇಶದಲ್ಲಿ ದೊರೆತಿರುವ ಹತ್ತು ಜೀವಂತ ಬಾಂಬ್ ಗಳಲ್ಲಿ ಎರಡು ಮರಾಟವಾಡದಲ್ಲಿ, ಲಭೇಶ್ವರ್ ದಲ್ಲಿ ಎರಡು, ಸಂತೋಷಿ ನಗರ ಮತ್ತು ಮಾತಾವಾಡಿಯಲ್ಲಿ ತಲಾ ಒಂದೊಂದು ಜೀವಂತ ಬಾಂಬ್ ಗಳು ಪತ್ತೆಯಾಗಿವೆ. ಬಾಂಬ್ ನಿಷ್ಕ್ರಿಯದಳ ಇದರಲ್ಲಿ ನಾಲ್ಕು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಡೈಮಂಡ್ ನಗರದಲ್ಲಿ ಎರಡು ಕಾರ್ ಬಾಂಬರ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಸೂರತ್ : ಮತ್ತೆ ಮೂರು ಜೀವಂತ ಬಾಂಬ್ ಪತ್ತೆ
ಬಾಂಬ್ ನಿಷ್ಕ್ರಿಯಗೊಳಿಸುವಲ್ಲಿ ಶ್ವಾನದ್ದೇ ಮುಖ್ಯಪಾತ್ರ
ಉಗ್ರರ ಮುಂದಿನ ಗುರಿ ಚೆನ್ನೈ, ಕೊಲ್ಕತ್ತಾ?
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications