ಜುಲೈ 30ರಂದು ಹಾಸನಕ್ಕೆ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್
ಹಾಸನ, ಜು.29: ಏಡ್ಸ್ ಮಹಾಮಾರಿ ಬಗ್ಗೆ ಜನಜಾಗೃತಿ ಮೂಡಿಸಲು ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ಹಾಸನದ ರೈಲ್ವೆ ನಿಲ್ದಾಣಕ್ಕೆ ಜು.30ರ ಬೆಳಗಿನ ಜಾವ 4 ಗಂಟೆಗೆ ಆಗಮಿಸಲಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್.ಶಂಕರನಾರಾಯಣ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ನಾಲ್ಕು ದಿನಗಳ ಕಾಲ ತಂಗಲಿದೆ. ಮೂರು ದಿನಗಳ ಕಾಲ ಹಾಸನ ರೈಲ್ವೆ ನಿಲ್ದಾನದಲ್ಲಿ ತಂಗಿ ನಾಲ್ಕನೆಯ ದಿನ ಅರಸಿಕೆರೆಯತ್ತ ಪ್ರಯಾಣ ಬೆಳಸಲಿದೆ. ದೇಶದ ಯಾವುದೇ ಜಿಲ್ಲೆಯಲ್ಲೂ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ನಾಲ್ಕು ದಿನ ತಂಗಿಲ್ಲ ಎಂದು ಶಂಕರನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 24 ಹಳ್ಳಿಗಳಿಗೆ ಸೇರಿದ ಆರು ಸಾಂಸ್ಕೃತಿಕ ತಂಡಗಳು ಪ್ರತಿದಿನ ಏಡ್ಸ್ ಬಗ್ಗೆ ರೈಲಿನಲ್ಲಿ ಜನಜಾಗೃತಿ ಮೂಡಿಸಲಿವೆ. ಸಾಂಸ್ಕೃತಿಕ ತಂಡಗಳು ಪ್ರತಿದಿನ ನಾಲ್ಕು ಗ್ರಾಮಗಳನ್ನು ಭೇಟಿ ಮಾಡಲಿವೆ. ಏಡ್ಸ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಈ ನಾಲ್ಕು ದಿನಗಳ ಕಾಲ 96 ಹಳ್ಳಿಗಳನ್ನು ಸಂಪರ್ಕಿಸಲಿದೆ. ರೈಲಿನಲ್ಲಿ ಏಡ್ಸ್ ಕುರಿತ ವಿಚಾರಸಂಕಿರಣಗಳು, ವೈದ್ಯರ ಪರೀಕ್ಷೆಗಳು ಹಾಗೂ ನಿಪುಣರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications