ರಾಜ್ಯ ಬಿಜೆಪಿಯ ನಾಲ್ಕು ಸಂಸದರು ಯುಪಿಎ ಪರ?
ನವದೆಹಲಿ, ಜು. 22 : ತೀವ್ರ ಕುತೂಹಲ ಘಟ್ಟ ತಲುಪಿರುವ ಕೇಂದ್ರದ ಯುಪಿಎ ಸರ್ಕಾರದ ವಿಶ್ವಾಸಮತ ಪ್ರದರ್ಶನಕ್ಕೆ ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಗಿವೆ. ಕರ್ನಾಟಕದ ಸಂಸದರಾದ ಎಚ್.ಟಿ.ಸಾಂಗ್ಲಿಯಾನ, ಬಸವಗೌಡ ಪಾಟೀಲ್ ಯತ್ನಾಳ್, ಮನೋರಮಾ ಮಧ್ವರಾಜ್ ಮತ್ತು ಮಂಜುನಾಥ್ ಕುನ್ನೂರು ಯುಪಿಎ ಪರ ಮತ ಚಲಾಯಿಸಲಿದ್ದಾರೆ ಎನ್ನುವ ದಟ್ಟವಾದ ಸುದ್ದಿ ಹಬ್ಬಿದೆ.
ಬಿಜೆಪಿಗೆ ಆಘಾತ ನೀಡುವಂತ ಸುದ್ದಿ ಇದಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ವಿಷಯವನ್ನು ಸ್ಪಷ್ಟವಾಗಿ ನಿಕಾಕರಿಸುವ ಬಿಜೆಪಿ ನಾಯಕರು ರಾಜ್ಯ ಸಂಸದರು ಯುಪಿಎ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದರ ಜತೆಗೆ ಸಂಸದರಾದ ಸಾಂಗ್ಲಿಯಾನ, ಡಿ.ಸಿ.ಶ್ರೀಕಂಠಪ್ಪ, ಜಿ.ಎಂ.ಸಿದ್ದೇಶ್ ಅವರುಗಳು ವಿವಿಧ ಕಾರಣಗಳಿಂದ ವಿಶ್ವಾಸಮತ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಸಂಸದರಿಗೂ ಆಹ್ವಾನ ನೀಡಿದ್ದು ಉಪಹಾರ ಕಾರ್ಯಕ್ರಮದಲ್ಲಿ ಈ ಸಂಸದರು ಅನುಪಸ್ಥಿತಿಯಾದ ಕಾರಣ ಈ ಸುದ್ದಿಗೆ ಮತ್ತಷ್ಟು ಬಲ ಬಂದಿದೆ. ಶ್ರೀಕಂಠಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಿದ್ದೇಶ್ ಪಕ್ಷದ ನಾಯಕರದೊಂದಿಗೆ ಸಂಪರ್ಕದಲ್ಲಿದ್ದು, ಉಪಹಾರಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಯಾವ ಸುಳಿವು ನೀಡದೆ ಸಂಸದ ಸಾಂಗ್ಲಿಯಾನ ಗೈರಾಗಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಒಂದು ಮೂಲದ ಪ್ರಕಾರ ಸಾಂಗ್ಲಿಯಾನ ಅವರನ್ನು ಇತ್ತೀಚಿನ ದಿನಗಳಲ್ಲಿ ನಾಯಕರು ಕಡೆಗಣಿಸಿದ್ದಾರೆ ಎನ್ನುವ ನೋವು ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸಾಂಗ್ಲಿಯಾನ ವಿಶ್ವಾಸಮತಕ್ಕೆ ತೆರಳದಿದ್ದರೆ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
(ಏಜೆನ್ಸೀಸ್)
ಯುಪಿಎ ಸರ್ಕಾರದ ಜುಟ್ಟು ಏಳು ಮಂದಿ ಕೈಯಲ್ಲಿ !
ವಿಶ್ವಾಸಮತದಲ್ಲಿ ಯುಪಿಎಗೆ ಸೋಲಾದರೆ ಮುಂದೆ?












Click it and Unblock the Notifications