ಮೋದಿ ವೀಸಾ ನಿರಾಕರಿಸಲು ಅಮೆರಿಕಾಗೆ ಆಗ್ರಹ
ವಾಷಿಂಗ್ಟನ್, ಜು.10: ಧಾರ್ಮಿಕ ಸ್ವಾತಂತ್ರ್ಯ ವನ್ನು ದುರುಪಯೋಗಪಡಿಸಿಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವುದೇ ಕಾರಣಕ್ಕೂ ಅಮೆರಿಕಾ ವೀಸಾ ಕೊಡಬಾರದು ಎಂದು ಭಾರತೀಯ ಮುಸ್ಲಿಂ ಸಮಿತಿಯ (ಯುಎಸ್) ಅಧ್ಯಕ್ಷ ರಶೀದ್ ಅಹ್ಮದ್ ಅಮೆರಿಕಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಕಂಡೋಲೀಜಾ ರೈಸ್ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಮೋದಿ ಅವರು ತಮ್ಮ ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ್ದಾರೆ. ಆಗಸ್ಟ್‌ನಲ್ಲಿ ನ್ಯೂಜೆರ್ಸಿಯಲ್ಲಿ ನಡೆಯುವ ವಿಶ್ವ ಗುಜರಾತಿ ಸಮ್ಮೇಳನದಲ್ಲಿ ಮೋದಿ ಭಾಗವಹಿಸಲು ಅಮೆರಿಕಾ ವೀಸಾಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ರಶೀದ್ ತಿಳಿಸಿದ್ದಾರೆ. ಹಾಗೆಯೇ ಮೋದಿ ಅವರ ಪ್ರವಾಸಿ ವೀಸಾವನ್ನು ದೃಢೀಕರಿಸಬಾರದು ಎಂದು ಅಮೆರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ ಅಮೆರಿಕಾವನ್ನು ಒತ್ತಾಯಿಸಿದೆ.
2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ 2,000ಕ್ಕೂ ಅಧಿಕ ಭಾರತೀಯ ಮುಸ್ಲಿಂರ ಮಾರಣಹೋಮ ನಡೆದಿದೆ. ಸಾವಿರಾರು ಮಂದಿಯನ್ನು ಅತ್ಯಾಚಾರ ಮಾಡಲಾಗಿದೆ, 2 ಲಕ್ಷಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಳ್ಳಲು ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಅಮೆರಿಕಾ ಧಾರ್ಮಿಕ ಸ್ವಾತಂತ್ರ್ಯ ಆಯೋಗ ತನ್ನ ದೂರಿನಲ್ಲಿ ತಿಳಿಸಿದೆ. ಆದರೆ ಈ ಬಗ್ಗೆ ಅಮೆರಿಕಾ ಸರ್ಕಾರ ಮೋದಿ ಅವರಿಗೆ ವೀಸಾ ಕೊಡಬೇಕೆ ಬೇಡವೆ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
(ಏಜೆನ್ಸೀಸ್)












Click it and Unblock the Notifications