ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್ ಸಂಭವನೀಯ ಯೋಜನೆಗಳು

By Staff
|
Google Oneindia Kannada News

P Chidambaram to present Karnataka stare budget 2008-09ಬೆಂಗಳೂರು, ಮಾ10: ಕರ್ನಾಟಕ ರಾಜ್ಯದ2008- 09 ನೇ ಸಾಲಿನ ಬಜೆಟ್ ಅನ್ನು ಸಂಸತ್ತಿನಲ್ಲಿ ಇಂದು ಪಿ. ಚಿದಂಬರಂ ಸುಮಾರು 12 ಗಂಟೆಗೆ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಕೃಷಿಕರ ಪಾಲಿಗೆ ಸಿಹಿಯಗಲಿದ್ದು, ಮಹಿಳೆ ಹಾಗೂ ಶಿಕ್ಷಣಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ. ಚುನಾವಣಾ ಪೂರ್ವ ಬಜೆಟ್ ಆಗಿರುವುದರಿಂದ ಕೇಂದ್ರ ಬಜೆಟ್ ಮಾದರಿಯಲ್ಲೇ ರಾಜ್ಯ ಬಜೆಟ್ ಕೂಡ ರೂಪಿಸಿರುವ ನಿರೀಕ್ಷೆಯಿದೆ.

ರಾಜ್ಯಪಾಲರ ಮುಖ್ಯ ಸಲಹೆಗಾರ ತಾರಕನ್ ಅವರು ನೀಡಿದ ಸುಳಿವಿನ ಪ್ರಕಾರ ಮಹಿಳಾ ಸಂಘಟನೆಗಳಿಗೆ ವಿಶೇಷ ಆರ್ಥಿಕ ನೆರವು ದೊರೆಯಲಿದೆ. ಸುವರ್ಣಗ್ರಾಮೋದಯ ಯೋಜನೆಗೆ ಹೆಚ್ಚಿನ ಅದ್ಯತೆ ನೀಡಲಾಗುವುದು.

ಉಳಿದಂತೆ ಸಂಭವನೀಯ ಯೋಜನೆಗಳ ವಿವರ ಇಂತಿದೆ:

*ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ 20 ಕೆ.ಜಿ. ಅಕ್ಕಿ ನೀಡಿಕೆ
*ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಳ
*ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ತ್ರೀಶಕ್ತಿ ಭವನ ಹಾಗೂ ಬ್ಯಾಂಕ್ ಸ್ಥಾಪನೆ
*ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಧನ
*ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನರ್ಸರಿ, ಪ್ರೀ ನರ್ಸರಿ ಸ್ಥಾಪನೆ
*ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ
*ಆಶ್ರಮ ಮನೆ ನಿರ್ಮಾಣ ನೀಡುತ್ತಿರುವ ನೆರವನ್ನು 30 ಸಾವಿರಕ್ಕೆ ಹೆಚ್ಚಿಸುವ ನಿರೀಕ್ಷೆ
*ವಸತಿ ಹೀನರಿಗೆ 5ಲಕ್ಷ ಮನೆ ನಿರ್ಮಾಣ ಯೋಜನೆ
* ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲು ಹೆಚ್ಚಿನ ಅನುದಾನ
*ನೀರಾವರಿಯೋಜನೆಗೆ 5 ರಿಂದ 6 ಸಾವಿರ ಕೋಟಿ ರು ಅನುದಾನ

ಸಂಸತ್ತಿನಲ್ಲಿ ಎರಡನೆ ಬಾರಿ ರಾಜ್ಯ ಬಜೆಟ್: ಸಂಸತ್ತಿನಲ್ಲಿ ಬಜೆಟ್ ಮಂಡನೆಯಾದ ನಂತರ ಇಂದು ಸಂಜೆ ನಗರದಲ್ಲಿ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಹಾಗೂ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಎಂ.ಆರ್. ಶ್ರೀನಿವಾಸಮೂರ್ತಿ ಬಜೆಟ್ ನಲ್ಲಿನ ಅಂಶಗಳನ್ನು ವಿವರಿಸಲಿದ್ದಾರೆ. ಮಾ13 ರ ನಂತರ ಮುಂಗಡ ಪತ್ರ ಕುರಿತ ಚರ್ಚೆ ಸಂಸತ್ತಿನಲ್ಲಿ ನಡೆಯಲಿದೆ.

1971 ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಸರ್ಕಾರ ಪದಚ್ಯುತಿಗೊಂಡ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಂಡಿತ್ತು. ಆಗ ರಾಜ್ಯಪಾಲರಾಗಿದ್ದ ಧರ್ಮವೀರ ಅವರ ನೇತೃತ್ವದಲ್ಲಿ ರೂಪಿತವಾದ ಬಜೆಟ್ಟನ್ನು ಸಂಸತ್ತಿನಲ್ಲಿ ಮೊದಲನೇ ಬಾರಿಗೆ ಮಂಡಿಸಲಾಗಿತ್ತು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X