ದುಬೈ ಮರಳುಗುಡ್ಡೆಯ ಮೇಲೆ ಸುಪ್ಪತ್ತಿಗೆಯ ಸಹಿ

View of dining hall in The Signature Residence apartment
The Signature Residences ಫ್ಲಾಟೊಂದರ ಊಟದ ಮನೆ

ಐಶಾರಾಮಿ ಬದುಕು, ಆಯಿಲ್ ಮನಿ, ತೈಲತಪ, ದೇವೇಂದ್ರನ ಆಸ್ಥಾನ, ಧರೆಗಿಳಿದ ಸ್ವರ್ಗ. ಬಣ್ಣಿಸಬಹುದು ಹೀಗೆಲ್ಲ. ಇವತ್ತಿನ ದುಬೈ ಅಂತೂ ನೀವಂದುಕೊಂಡಂತಿಲ್ಲ. ಅನೇಕ ಮಧ್ಯಪ್ರಾಚ್ಯ ರಾಷ್ಟ್ರಗಳು ಇನ್ನೂ ಪರಂಪರೆಗೆ, ಮಡಿವಂತಿಕೆಗೆ, ಅನುವಂಶಿಕತೆಗೆ, ಧಾರ್ಮಿಕ ಕಟ್ಟುಪಾಡುಗಳಿಗೆ ನೇತು ಹಾಕಿಕೊಂಡಿದ್ದರೂ ದುಬೈ ಮಾತ್ರ ತೀರ ವಿಭಿನ್ನ. ಮುಸ್ಲಿಂ ದೇಶಗಳ ಸಂಸ್ಕೃತಿಗೆ ಈ ನಗರ ಕಪ್ಪುಚುಕ್ಕೆಯೂ ಹೌದು, ಬೆಳ್ಳಿ ಚುಕ್ಕಿಯೂ ಹೌದು.

ಆಧುನಿಕ ಜೀವನ ಶೈಲಿಗೆ ಮೈತೆರೆದುಕೊಂಡ ಅರಬ್‌ರ ಆರ್ಥಿಕ ರಾಜಧಾನಿ ನಮನಮೂನೆಯ ಜೀವನಚಿತ್ರಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಎಲ್ಲ ದೇಶ, ಎಲ್ಲ ಜನಾಂಗ, ನಾನಾ ಭಾಷಾ ಸಂಸ್ಕೃತಿಗಳ ಆಗರವೂ ಆಗಿರುವ ದುಬೈಗಿಂತ ಫ್ರೀ ಸೊಸೈಟಿ ಜಗತ್ತಿನಲ್ಲಿ ಇನ್ನೊಂದಿಲ್ಲ. ದುಬೈ ನಗರದ ಸಾಮಾಜಿಕ, ಆರ್ಥಿಕ ಜೀವನ ಶೈಲಿಗಳನ್ನು ಕಂಡವರಿಗೆ, ಅಮೆರಿಕಾ ಕೂಡ ಮಡಿವಂತರ ದೇಶ ಎನಿಸಿದರೆ ಆಶ್ಚರ್ಯವಿಲ್ಲ.

ದುಬೈ ನಗರದಲ್ಲಿ ಬರ್ ದುಬೈ (ಹಳೆ) ದೇರ್ ದುಬೈ (ಹೊಸ) ಎಂಬ ಎರಡು ಪ್ರದೇಶಗಳಿವೆ. ಓಲ್ಡ್ ಡೆಲ್ಲಿ ನ್ಯೂ ಡೆಲ್ಲಿ ಇದ್ದ ಹಾಗೆ. ಆದರೆ, ಹಳತನ್ನೂ ಹೊಸತನ್ನೂ ಮೀರಿ ಸಾಗಿರುವ ಹೊಚ್ಚಹೊಸ ದುಬೈ ಈಗ ಈ ನಗರದ ಅತ್ಯಾಕರ್ಷಣೆಯ ಪ್ರದೇಶವಾಗಿದೆ. ಮದುವೆಯಾದರೂ, ಆಗದಿದ್ದರೂ, ಈ ಭಾಗದಲ್ಲಿ ಮನೆ ಮಾಡಿಕೊಂಡಿರುವುದು ಪ್ರತಿಷ್ಠೆಯ ಸಂಕೇತ.

ಈ ಭಾಗದಲ್ಲಿ ಗಗನಚುಂಬಿ ಕಟ್ಟಡಗಳು ಹೇರಳವಾಗಿವೆ. ಆ ಥಳಕು ಬಳಕುಗಳನ್ನು ನೋಡಿಯೇ ಅನುಭವಿಸಬೇಕು. ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾದ ನಿರ್ಮಾಣ ಕಂಪನಿಗಳು ಇಲ್ಲಿ ನಿರ್ಮಿಸಿರುವ ಫ್ಲಾಟುಗಳು ಐಶಾರಾಮಿ ಬದುಕಿಗೆ ಮತ್ತು ಆಗರ್ಭ ಶ್ರೀಮಂತಿಕೆಗೆ ಕನ್ನಡಿ ಹಿಡಿಯುತ್ತವೆ. ಖಾಸಗಿ ವಲಯದ ಡಿಎಎಂಎಸಿ ಪ್ರಾಪರ್‌ಟೀಸ್ ನಿರ್ಮಾಣ ಸಂಸ್ಥೆ ದುಬೈನ ಮರೀನಾದಲ್ಲಿ "ಓಶನ್ ಹೈಟ್ಸ್" ಹಾಗೂ ಸಮುದ್ರ ತೀರದ ವಾಣಿಜ್ಯ ಕೇಂದ್ರದಲ್ಲಿ 82 ಅಂತಸ್ತಿನ "ಲೋಟಸ್ ಹೈಟ್ಸ್ " ಫ್ಲಾಟ್ಸ್‌ಗಳನ್ನು ಕಟ್ಟಿದೆ. ಈ ಅಪಾರ್ಟ್‌ಮೆಂಟುಗಳಿಗೆ ಯಾವುದ್ಯಾವುದೋ ಪ್ರಶಸ್ತಿಗಳು ಬಂದಿವೆ.

ಈ ಗಗನಚುಂಬಿ ಕಟ್ಟಡಗಳಲ್ಲಿ ಇತ್ತೀಚಿನ ಹೊಸ ಸೇರ್ಪಡೆಯೆಂದರೆ 67 ರಿಂದ 75ನೇ ಅಂತಸ್ತಿನಲ್ಲಿ ವಿಶೇಷವಾಗಿ ನಿರ್ಮಿಸಿರುವ ಚೆಂದದ ಮನೆ "The Signature Residences". ಈ ಅರಮನೆಗಳು ಒಂದು ಅಂತಸ್ತಿಗೆ ಒಂದರಂತೆ ಇರುತ್ತದೆ. ಬೆಲೆ 35ರಿಂದ 40 ದಶಲಕ್ಷ ಡಿರಾಮು (AED). ಸದ್ಯದಲ್ಲೇ ಪ್ರಪಂಚದ ಇತರ ಭಾಗಗಳಲ್ಲೂ ಈ ಬಗೆಯ ಕುಟೀರಗಳನ್ನು ಕಟ್ಟುವ ಯೋಜನೆ ಇದೆ ಎಂದು ಡಿಎಎಂಎಸಿ ಅಧ್ಯಕ್ಷ ಹುಸೇನ್ ಸಜ್‌ವಾನಿ ಹೇಳಿದ್ದಾರೆ. ನಿಮ್ಮೂರಿಗೂ ಬರುತ್ತದೆ, ನಮ್ಮೂರಲ್ಲೂ ತಲೆ ಎತ್ತುತ್ತದೆ, ಒಂದಲ್ಲ ಒಂದು ದಿನ !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+