ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಡು ಲಂಗದ ಸೋದರಿಯರು ಸೀರೆ ಹೊದ್ದಾಗ

By Super
|
Google Oneindia Kannada News

ಬೆಂಗಳೂರು, ಮಾ.05 : ವರ್ಷದ 365 ದಿನಗಳ ಕಾಲ ಟೆನ್ನಿಸ್ ತುಂಡು ಲಂಗದಲ್ಲಿಯೇ ಇರುವ ಈ ಟೆನ್ನಿಸ್ ಲೋಕದ ರತ್ನೆಯರು ಸೀರೆಯುಟ್ಟು ಕ್ಯಾಟ್ ವಾಕ್ ಮಾಡಿದರೆ ಹೇಗಿರತ್ತೆಂದು ಊಹಿಸಿಕೊಳ್ಳಿ. ಮೈತುಂಬ ಸೀರೆ ಹೊದ್ದು ಹೈಹೀಲ್ಡ್ ಚಪ್ಪಲಿ ಧರಿಸಿ ಕ್ಯಾಟ್ ವಾಕ್ ಮಾಡಲಾಗದೆ ಎಡವಿ ಬಿದ್ದಿರಬಹುದೆಂಬ ಊಹೆಯೇನಾದರೂ ಇದ್ದರೆ ಬದಲಿಸಿಕೊಳ್ಳಿ. ಭಾರತೀಯ ನಾರಿಯರು ನಾಚುವಂತೆ ಸೀರೆ ಧರಿಸಿ ಕ್ಯಾಟ್ ವಾಕ್ ಮಾಡಿದ್ದಾರೆ ಟೆನ್ನಿಸ್ ವಿಶ್ವ ಚಾಂಪಿಯನ್ ಸೋದರಿಯರಾದ ವೀನಸ್ ಮತ್ತು ಸೆರೆನಾ ವಿಲಿಯಂಸ್. ಭಾರತೀಯ ಸಂಸ್ಕೃತಿಯ ಸಂಕೇತವಾದ ಸೀರೆಯ ಬಗ್ಗೆ ಇವರಿಗೆ ಭಾರೀ ಅಭಿಮಾನ. ಸೀರೆಯ ಸೌಂದರ್ಯಕ್ಕೆ ಮಾರುಹೋದ ಇವರಿಬ್ಬರನ್ನು ಈ 'ಅಪರೂಪ'ದ ದಿರಿಸಿನಲ್ಲಿ ನೋಡುವುದೇ ಒಂದು ಸೊಬಗು.

ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನ್ನಿಸ್‌ನಲ್ಲಿ ಗ್ಲಾನ್ ಸ್ಲಾಮ್ ಬಿಟ್ಟರೆ ಒಂದೇ ಟೂರ್ನಿಯಲ್ಲಿ ಆಡದ ವಿಲಿಯಂಸ್ ಸಹೋದರಿಯರು ಈ ಬಾರಿ ಒಂದೇ ಟೂರ್ನಿ ಮಾತ್ರವಲ್ಲ ಒಂದೇ ಗುಂಪಿನಲ್ಲಿ ಆಡುತ್ತಿದ್ದಾರೆ. ಅವರಿಬ್ಬರನ್ನು ಒಂದೇ ಗುಂಪಿನಲ್ಲಿರಿಸಿ ಇಬ್ಬರೂ ಫೈನಲ್ ತಲುಪದಂತೆ ಮಾಡಿದ್ದಾರೆಂದು ಅವರಿಗೆ ಅಸಮಾಧಾನವಿದ್ದರೂ ಡಬಲ್ಸ್‌ನಲ್ಲಿ ಇಬ್ಬರೂ ಸೇರಿ ಎದುರಾಳಿಗಳನ್ನು ಸದೆಬಡಿದು ಟ್ರೋಫಿ ಗೆಲ್ಲುವ ವಿಶ್ವಾಸವಿರಿಸಿಕೊಂಡಿದ್ದಾರೆ. ಸಿಂಗಲ್ಸ್‌ನಲ್ಲಿ ಫೈನಲ್ ಅಲ್ಲದಿದ್ದರೂ ಸೆಮಿಫೈನಲ್‌ನಲ್ಲಿ ಒಬ್ಬರನ್ನೊಬ್ಬರು ಎದುರಾಗುವ ಆಶಾಭಾವನೆಯನ್ನೂ ಹೊಂದಿದ್ದಾರೆ.

ನಮ್ಮ ಮೂಗುನತ್ತಿನ ಸುಂದರಿ ಸಾನಿಯಾ ಮಿರ್ಜಾ ಇಲ್ಲಿ ಆಡಲು ನಿರಾಕರಿಸಿದರೇನಂತೆ ವಿಲಿಯಂಸ್ ಸಹೋದರಿಯರು ಆಡುತ್ತಿರುವುದು ಬೆಂಗಳೂರು ಟೆನ್ನಿಸ್ ಪ್ರಿಯರಿಗೆ ಭರ್ಜರಿ ಔತಣಕೂಟ ಏರ್ಪಡಿಸಿದಂತಾಗಿದೆ.(ದಟ್ಸ್‌ಕನ್ನಡ ವಾರ್ತೆ)

English summary
The Williams sisters, who were denied an opportunity of meeting in the Bangalore Open singles final by the draw, plan to compensate by winning the doubles title in their first tournament appearance in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X