ಉಡುಪಿ ನಗರಿಯಲ್ಲಿ ಭಿಕ್ಷುಕರಿಗೆ ಬರಗಾಲ !!!
ಉಡುಪಿ, ಫೆ.28: ಮಾರ್ಚ್ 1 ರಿಂದ ಉಡುಪಿ ನಗರವನ್ನು ಭಿಕ್ಷುಕ ರಹಿತ ಪ್ರದೇಶ ಎಂದು ಘೋಷಿಸಲು ಸಕಲ ಸಿದ್ಧತೆ ನಡೆದಿದೆ.. ಜಿಲ್ಲಾಡಳಿತದ ಸಹಕಾರಕ್ಕಾಗಿ ಕಾದಿದ್ದೇವೆ ಎಂದು ಸಾಮಾಜಿಕ ಜೀವನ ಮತ್ತು ಮಾನವೀಯ ಹಕ್ಕುಗಳ ಸಂಘಟಕರಾದ ಬಾಲಕೃಷ್ಣ ರೈ ಹಾಗೂ ನಿತ್ಯಾನಂದ ವೊಲ್ಲಕಡ್ ಹೇಳಿದ್ದಾರೆ.
ನಗರದ ಬಸ್ ನಿಲ್ದಾಣ, ಮಣಿಪಾಲ್ ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಮುಂದುವರೆದಿದೆ. ಭಿಕ್ಷುಕರಿಗೆನಿಟ್ಟೂರು, ಉಡುಪಿ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲಾಗುವುದು.ಅವರ ಸಾಮಾಜಿಕ ಹಾಗೂ ನೈತಿಕ ಮಟ್ಟವನ್ನು ಸುಧಾರಣೆಗೊಳಿಸಿ, ಭಿಕ್ಷಾಟನೆಯನ್ನು ಮಾಡದಂತೆ ಮಾಡಿ, ದುಡಿದು ತಿನ್ನುವಂತೆ ಪ್ರೇರೇಪಿಸಲಾಗುವುದು ಎಂದು ನಿತ್ಯಾನಂದ್ ಹೇಳಿದರು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗ, ಪೊಲೀಸ್ ಇಲಾಖೆಯ ನೆರವಿನಿಂದ ಈ ಕಾರ್ಯ ಯಶಸ್ವಿಗೊಳಿಸುವ ನಿರೀಕ್ಷೆಯಿದೆ.ಭಿಕ್ಷಾಟನೆ ಮಾಫಿಯಾಕ್ಕೆ ಬಲಿಯಾಗುತ್ತಿರುವ ಯುವಕ/ತಿಯರು, ಮಕ್ಕಳಿಗೆ ತಿಳಿಹೇಳುವ ಕಾರ್ಯವನ್ನು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನೆರವೇರಿಸಲಾಗುವುದು. ಸಾರ್ವಜನಿಕರು ನಮ್ಮ ಈ ಯೋಜನೆಗೆ ಸಹಕರಿಸಿದರೆ ಉಡುಪಿ ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಬಾಲಕೃಷ್ಣ ರೈ ಸುದ್ದಿಗಾರರಿಗೆ ತಿಳಿಸಿದರು.
(ಏಜೆನ್ಸೀಸ್)












Click it and Unblock the Notifications