ಸ್ಪೀಡ್ ಗವರ್ನರ್ ಗೆ ತಡೆಯಾಜ್ಞೆ: ಮುಷ್ಕರ ವಾಪಾಸ್
ನವದೆಹಲಿ, ಫೆ .26: 'ಹಳೆ ವಾಹನಗಳಿಗೆ ಒಂದು ತಿಂಗಳೊಳಗೆ ಸ್ಪೀಡ್ ಗವರ್ನರ್ ಅಳವಡಿಕೆ. ಹೊಸ ವಾಹನಗಳಿಗೆ ತಕ್ಷಣವೇ ವೇಗ ನಿಯಂತ್ರಕ ಅಳವಡಿಸಬೇಕು'ಎಂಬ ರಾಜ್ಯ ಉಚ್ಚನ್ಯಾಯಾಲಯದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಖಾಸಗಿ ವಾಹನಗಳ ಮುಷ್ಕರಅಂತ್ಯಗೊಳ್ಳಲಿದೆ. ಮುಷ್ಕರ ಹಿಂತೆಗೆತದ ಭರವಸೆಯನ್ನು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ನೀಡಿದ್ದಾರೆ.
ಅಪಘಾತಗಳ ಅಂಕಿ ಅಂಶ,ಅವೈಜ್ಞಾನಿಕ ವಿಧಾನ ಹಾಗೂ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ ಎನ್ನಲಾಗಿದೆ. ನಗರದಲ್ಲಿ ನೆನ್ನೆಯಿಂದ ಮ್ಯಾಕ್ಸಿ ಕ್ಯಾಬ್ ಹಾಗೂ ಐಟಿ ಬಿಪಿಓ ಕಂಪೆನಿಗಳ ಕ್ಯಾಬ್ ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಲಾರಿ ಮಾಲೀಕ ಸಂಘ ಕರೆ ಕೊಟ್ಟಿದ್ದ ಮುಷ್ಕರಕ್ಕೆ ಕೊಂಚ ಹಿನ್ನೆಡೆ ಉಂಟಾಗಿತ್ತು.












Click it and Unblock the Notifications