ಹೊಗೇನಕಲ್‌ನಲ್ಲಿ ಕನ್ನಡ ಕಾರ್ಯಕರ್ತರ ಬಂಧನ

ಬೆಂಗಳೂರು, ಫೆ.26: ಹೊಗೇನಕಲ್ ಪ್ರದೇಶದಲ್ಲಿ ತಮಿಳುನಾಡು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಜಲ ವಿದ್ಯುತ್ ಯೋಜನೆಯನ್ನು ವಿರೋಧಿಸಿ ಪ್ರತಿಭಟಿಸಿದ 25ಕ್ಕೂ ಹೆಚ್ಚು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ ಕನ್ನಡ ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಇಂದು ಬಂಧಿಸಿದ್ದಾರೆ.

ಹೊಗೇನಕಲ್ ಪರಿವೀಕ್ಷಣೆಗೆ ತೆರಳಿ ಅಲ್ಲಿನ ವೀಕ್ಷಣ ಗೋಪುರ, ಸ್ನಾನಘಟ್ಟ, ನಮಗೆ ಸೇರಬೇಕೆಂದು ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಇಂದು ಬಂಧಿಸಿದರು. ಹೊಗೇನಕಲ್ ಪ್ರದೇಶಕ್ಕೆ ಹೋಗಿ ಘೋಷಣೆ ಕೂಗುವುದು, ಐದು ಜನಕ್ಕಿಂತ ಹೆಚ್ಚಿಗೆ ಅಲ್ಲಿಗೆ ಹೋಗಬಾರದೆಂದು ನಿಷೇಧ ಹೇರಲಾಗಿದೆ.

ಆದರೆ, ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ 25ಕ್ಕೂ ಅಧಿಕ ಕಾರ್ಯಕರ್ತರು ಅಲ್ಲಿಗೆ ಹೋಗಿ ಘೋಷಣೆಗಳನ್ನು ಕೂಗಿದ್ದಲ್ಲದೆ ಕನ್ನಡದ ಬಾವುಟವನ್ನೂ ಹಾರಿಸಿದ್ದಾರೆ ಎಂದು ಕನಕಪುರ ಜಿಲ್ಲಾ ಅರಣ್ಯಾಧಿಕಾರಿ ಗೀತಾಂಜಲಿ ಅವರು ಪೊಲೀಸರಿಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+