ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿಯಾಗಿ ಜಲಾಂತರ್ಗಾಮಿ ಕ್ಷಿಪಣಿ ಪ್ರಯೋಗ

By Super
|
Google Oneindia Kannada News

India test fires first under-sea missileವಿಶಾಖಪಟ್ಟಣಂ, ಫೆ.26: ಇದೇ ಮೊದಲ ಬಾರಿಗೆ ಭಾರತ ವಿಶಾಖಪಟ್ಟಣಂ ಬಳಿ ಜಲಾಂತರ್ಗಾಮಿ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ಈ ರೀತಿಯ ಜಲಾಂತರ್ಗಾಮಿ ಕ್ಷಿಪಣಿ ತಂತ್ರಜ್ಞಾನ ಕೇವಲ ಐದು ದೇಶಗಳ ಬಳಿ ಮಾತ್ರ ಇದೆ.

K-15 ಹೆಸರಿನ ಜಲಾಂತರ್ಗಾಮಿ ಕ್ಷಿಪಣಿ 700 ಕಿ.ಮೀಗಳ ವ್ಯಾಪ್ತಿಯನ್ನು ಹೊಂದಿದೆ. 50 ಮೀಟರ್ ಆಳದ ನೀರಿನಿಂದ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು. ಈ ರೀತಿಯ ಜಲಾಂತರ್ಗಾಮಿ ಕ್ಷಿಪಣಿ ಪ್ರಯೋಗಕ್ಕೆ ಬಳಸುವ ಸಬ್‌ಮೆರೀನ್‌ಗಳು ಭಾರತ ಬಳಿ ಇಲ್ಲ.

ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಚೀನಾ ದೇಶಗಳ ಸಾಲಿಗೆ ಐದನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಈ ಜಲಾಂತರ್ಗಾಮಿ ಕ್ಷಿಪಣಿಯನ್ನು ''ಸಾಗರಿಕಾ'' ಎಂಬ ರಹಸ್ಯ ಸಂಕೇತದಿಂದ ಗೌಪ್ಯವಾಗಿ ಐದು ಸಲ ಪರೀಕ್ಷಿಸಲಾಗಿತ್ತು. K-15 ಜಲಾಂತರ್ಗಾಮಿ ಕ್ಷಿಪಣಿಗೆ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X