ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲಿ ನೀರಿಲ್ಲದೆ ಸಾಯುತ್ತಿರುವವರ ಸಂಖ್ಯೆ ಗೊತ್ತಾ?

By Staff
|
Google Oneindia Kannada News

ಬೆಂಗಳೂರು, ಡಿ.24 : ಶುದ್ಧ ಕುಡಿಯುವ ನೀರು ಸಿಗದೆ ವಿಶ್ವದಾದ್ಯಂತ ಪ್ರತಿನಿತ್ಯ 6000ಕ್ಕೂ ಅಧಿಕ ಜನ ಸಾಯುತ್ತಿದ್ದಾರೆ. ಒಂದು ಶತಕೋಟಿ ಜನ ಶುದ್ಧ ಕುಡಿಯುವ ನೀರಿಗಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ ಎಂದು ಮ್ಯಾರಥಾನ್ ಓಟಕ್ಕೆ ಹೆಸರಾದ ಸುನಿಲ್ ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಬಗ್ಗೆ ಪ್ರಪಂಚದ ಗಮನ ಸೆಳೆಯಲು ಕ್ಯಾಲಿಫೋರ್ನಿಯಾ ಮೂಲದ Blue Planet Run Foundation ಎಂಬ ಸಂಸ್ಥೆ 25 ಸಾವಿರ ಕಿ.ಮೀ ಮ್ಯಾರಥಾನ್ ಓಟವನ್ನು ಜೂನ್‌ನಿಂದಸೆಪ್ಟೆಂಬರ್‌ವರೆಗೆ ಆಯೋಜಿಸಿತ್ತು. 95 ದಿನಗಳ ನಿರಂತರ ಓಟದಲ್ಲಿ ಭಾಗವಹಿಸಿದ್ದ ಏಕೈಕ ಭಾರತೀಯ ಓಟಗಾರ ಸುನಿಲ್ ಜಯರಾಜ್, ಕೋಲಾರದವರು. ಈಗ ಅವರು ಈಸ್ಟರ್ ಮ್ಯಾಂಚೆಸ್ಟರ್ ವಿವಿಯಲ್ಲಿ ನೀರಿನ ನಿರ್ವಹಣೆ ಬಗ್ಗೆ ಪಿಎಚ್‌ಡಿ ಮಾಡುತ್ತಿದ್ದಾರೆ.

ಕೋಲಾರದಲ್ಲಿ ಒಂದು ಕೊಡ ನೀರಿಗೆ 4ರೂ.ಕೊಡಬೇಕು. ಅಷ್ಟೆ ಅಲ್ಲದೆ ಬಿಹಾರ, ಬಾಂಗ್ಲಾದೇಶ, ನೇಪಾಳದಲ್ಲಿ ಕುಡಿಯುವ ನೀರಿಗಾಗಿ ಪಡುತ್ತಿರುವ ಪಾಡು ಹೇಳತೀರದು. ಈ ನೀರಿನ ದಾಹವೇ ನನ್ನನು ಓಡುವಂತೆ ಮಾಡಿದೆ. ಆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರೇರಣೆಯಾಯಿತು ಎಂದು ಅವರು ಇತ್ತೀಚೆಗಿನ ಭಾರತಕ್ಕೆ ಭೇಟಿ ನೀಡಿದ್ದಾಗ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಕ್ವಾಲಿಟಿ ಎಂಜಿನಿಯರ್ ಹುದ್ದೆಯನ್ನು ಬಿಟ್ಟು ನೀರಿನ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಅವರು ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ನಿಧಿಗಾಗಿ ಯುಎಸ್‌ನಲ್ಲಿ ಓಡಿದ್ದಾರೆ. 43ಕಿ.ಮೀ ಮ್ಯಾರಥಾನ್ ಓಡಿ ಎಂದು ಕೆಲವರು ಸಲಹೆಯನ್ನೂ ಕೊಟ್ಟಿದ್ದಾರೆ. ನಾನೊಬ್ಬ ಕ್ರೀಡಾಪಟುವಲ್ಲ. ಆದರೆ ಸಮಸ್ಯೆ ಬಗ್ಗ್ಗೆ ಇರುವ ಕಾಳಜಿ ನನ್ನನ್ನು ಓಡುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು, ಮಕ್ಕಳಿಗೆ ಸಹಾಯ ಮಾಡಲು, ಭಾರತದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು ನಾನು ಓಡಲೇ ಬೇಕಾಗಿದೆ. ನನ್ನ ಪ್ರಥಮ ಮ್ಯಾರಥಾನ್ ಓಟ 2003ರಲ್ಲಿ ಡೆಟ್ರಾಯಿಟ್‌ನಲ್ಲಿ ಪ್ರಾರಂಭವಾಯಿತು ಎಂದು ಅವರು ತಮ್ಮ ಓಟದ ದಿನಗಳನ್ನು ನೆನಪಿಸಿಕೊಂಡರು.

ಅವರ ಓಟವನ್ನು ಪ್ರೋತ್ಸಾಹಿಸಲು ಹಲವಾರು ಸಂಘಸಂಸ್ಥೆಗಳು ಮುಂದೆ ಬಂದಿವೆ. ಮೈಸೂರಿನ ಡಾ.ನಾಗರಾಜ್ ದಂಪತಿಗಳು ಮೈಲಿ ಓಟಾಕ್ಕೆ 500ಯುಎಸ್ ಡಾಲರ್ ಕೊಡಲು ಮುಂದೆ ಬಂದಿದ್ದಾರೆ ಎಂದು ಅವರು ತಿಳಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X