ಬಾಡಿಗೆದಾರರೇ, ಮಾಲೀಕರು ಇನ್ಮುಂದೆ ಸುಮ್ಮನಿರೊಲ್ಲ!
ನವದೆಹಲಿ, ಡಿ.21 : ಇನ್ನು ಮುಂದೆ ಬಾಡಿಗೆದಾರರು ಮನೆ ಮಾಲಿಕರ ಅನುಮತಿ ಇಲ್ಲದೆ ಕಿಟಕಿ, ಬಾಗಿಲು, ಕಟ್ಟಡದ ವಾಸ್ತುಗಳನ್ನು ಬದಲಾಯಿಸುವಂತಿಲ್ಲ. ಮನೆಮಾಲೀಕರನ್ನು ಬೈಯ್ಯುವಂತಿಲ್ಲ. ಬೈದರೆ, ಮನೆಗೆ ಹಾನಿ ಮಾಡಿದರೆ ಹಿಂದೆಮುಂದೆ ನೋಡದೆ ಮನೆ ಖಾಲಿ ಮಾಡಿಸಬಹುದು. ಹಾಗಂತ ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿದೆ.
ಕೋಲ್ಕತಾ ನ್ಯಾಯಾಲಯ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯ, ಮಾಲೀಕರ ಪೂರ್ವಾನುಮತಿ ಇಲ್ಲದೆ ಕಟ್ಟಡ ವಿನ್ಯಾಸ, ರಚನೆ ಬದಲಿಸಿದರೆ ಮನೆಯನ್ನು ಖಾಲಿ ಮಾಡಿಸಬಹುದು ಎಂದು ತೀರ್ಪು ಕೊಟ್ಟಿದೆ. ಕೋಲ್ಕತಾದ ಘೋಷ್ ಎಂಬುವವರು ಮಳಿಗೆಯೊಂದನ್ನು ಬಾಡಿಗೆಗೆ ಪಡೆದು, ಅದರ ಬಾಗಿಲನ್ನು ಕಟ್ಟಡ ಮಾಲೀಕರ ಅನುಮತಿ ಪಡೆಯದೆ ಬದಲಾಯಿಸಿದ್ದರು. ಇದನ್ನು ಪ್ರಶ್ನಿಸಿದಾಗ ಮನೆ ಮಾಲೀಕರಿಗೆ ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮನೆ ಮಾಲೀಕರು ದೂರು ದಾಖಲಿಸಿದ್ದರು.
(ಏಜನ್ಸೀಸ್)












Click it and Unblock the Notifications