ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾ ಫೆಡರಲ್ ಪೊಲೀಸರ ವಿರುದ್ಧ ಹನೀಫ್‌ಗೆ ಜಯ

By Staff
|
Google Oneindia Kannada News

ಆಸ್ಟ್ರೇಲಿಯಾ ಫೆಡರಲ್ ಪೊಲೀಸರ ವಿರುದ್ಧ ಹನೀಫ್‌ಗೆ ಜಯಮೆಲ್ಬೋರ್ನ್, ಡಿ.21 : ಲಂಡನ್ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ನಡೆದ ಆಕ್ರಮಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಫೆಡರಲ್ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ಬೆಂಗಳೂರಿನ ವೈದ್ಯ ಡಾ.ಹನೀಫ್‌ ವೀಸಾ ರದ್ದು ಮಾಡಿದ ಪ್ರಕರಣದಲ್ಲಿ ಜಯಶಾಲಿಯಾಗಿದ್ದಾರೆ.

ಬಂಧನಕ್ಕೊಳಗಾಗಿದ್ದ ಹನೀಫ್ ಅವರಿಗೆ ಆಸ್ಟ್ರೇಲಿಯಾ ನ್ಯಾಯಾಲಯದಿಂದ ಜಾಮೀನು ದೊರೆತ ಕೆಲಕ್ಷಣಗಳಲ್ಲೇ ವೀಸಾ ಕಿತ್ತುಕೊಂಡಿದ್ದನ್ನು ವಿರೋಧಿಸಿ ವಲಸೆ ಸಚಿವ ಕೆವಿನ್ ಆಂಡ್ರ್ಯೂಸ್ ವಿರುದ್ಧ ಹನೀಫ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಲು ಅವಕಾಶವಿದೆಯಾದರೂ ಹನೀಫ್ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದರಿಂದ ಕೆವಿನ್‌ಗೆ ಮುಖಭಂಗವಾದಂತಾಗಿದೆ.

ಫೆಡರಲ್ ಪೊಲೀಸರಿಂದ ಅನ್ಯಾಯವಾಗಿ ಬಂಧನಕ್ಕೊಳಗಾಗಿದ್ದಕ್ಕೆ ಹನೀಫ್ ಪರಿಹಾರವನ್ನೂ ಕೇಳಬಹುದಾಗಿದೆ. ಭಯೋತ್ಪಾದಕ ಎಂಬ ಹಣೆಪಟ್ಟಿಕಟ್ಟಿದ್ದರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಬಹುದಾಗಿದೆ. ವೀಸಾ ಮತ್ತೆ ದೊರೆತಿರುವುದರಿಂದ ಹನೀಫ್ ಮತ್ತೆ ಆಸ್ಟ್ರೇಲಿಯಾಕ್ಕೆ ತೆರಳಿ ಮೊದಲು ಕೆಲಸಕ್ಕಿದ್ದ ಕ್ವೀನ್ಸ್‌ಲ್ಯಾಂಡ್ ಆಸ್ಪತ್ರೆಯಲ್ಲಿ ನೌಕರಿ ಮುಂದುವರಿಸಲು ದಾರಿ ಮುಕ್ತವಾಗಿದೆ. ಆದರೆ ಆ ಸಾಧ್ಯತೆಯನ್ನು ಹನೀಫ್ ತಳ್ಳಿಹಾಕಿದ್ದಾರೆನ್ನಲಾಗಿದೆ.

ಫೆಡರಲ್ ಪೊಲೀಸರ ವಿರುದ್ಧ ದಾವೆ ಹೂಡಲು ಅವಕಾಶಗಳಿದ್ದರೂ ಸಂಚಿನ ಆರೋಪದಿಂದ ಮುಕ್ತರಾಗುವುದು ಹನೀಫ್‌ರ ಮೊದಲ ಆದ್ಯತೆಯಾಗಿತ್ತು ಎಂದು ಹನೀಫ್‌ರ ವಕೀಲ ಪೀಟರ್ ರುಸ್ಸೋ ಆಸ್ಟ್ರೇಲಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X