ಮೈಸೂರು : ದಿಶಾಂತರಕ್ಕೆ ಪ್ರತಿಷ್ಠಿತ ಚದುರಂಗ ಪ್ರಶಸ್ತಿ
ಮೈಸೂರು, ಡಿ.20 : ನಾಟಕಕಾರ ಡಿ.ಸಿ.ಚೌಗಲೆ ಅವರ 'ದಿಶಾಂತರ' ಕೃತಿಗೆ ಈ ಸಾಲಿನ ಚದುರಂಗ ಪ್ರಶಸ್ತಿ ಬಂದಿದೆ. ಮೈಸೂರಿನ ಚದುರಂಗ ಪ್ರತಿಷ್ಠಾನ ನೀಡುವ ಪ್ರಶಸ್ತಿಯು 10ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
ಜ.1ರಂದು ನಡೆಯಲಿರುವ ಸಮಾರಂಭದಲ್ಲಿ ಚೌಗಲೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರೊ.ಡಿ.ಎ.ಶಂಕರ್, ಚಿದಂಬರ ರಾವ್ ಜಂಬೆ, ಸಿ.ಬಸವಲಿಂಗಯ್ಯ ಆಯ್ಕೆ ಸಮಿತಿಯಲ್ಲಿದ್ದರು ಎಂದು ಚದುರಂಗ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಿ.ಸಿ.ಸುಬ್ರಹ್ಮಣ್ಯ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications