ಜನವರಿ ಮೊದಲ ವಾರದಲ್ಲಿ ಆಳ್ವಾಸ್ ವಿರಾಸತ್ ಉತ್ಸವ
ಮಂಗಳೂರು, ಡಿ.20 : ಐದು ದಿನಗಳ ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ವಿರಾಸತ್2008' ಜ.2ರಿಂದ 6ರವರೆಗೆ ಮಿಜಾರ್ ನ ಶೋಭವನದಲ್ಲಿ ನಡೆಯಲಿದೆ. ಮಂಗಳೂರಿನಿಂದ 30ಕಿ.ಮೀ.ದೂರದಲ್ಲಿರುವ ಈ ಊರಿಗೆ ಉತ್ಸವದ ನೆಪದಲ್ಲಿ ಒಂದು ಸಲ ಬಂದು ಹೋಗಿ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ, ನಾಡಿನ ವಿವಿಧ ಕಲಾವಿದರು ವೇದಿಕೆಗೆ ಶೋಭೆ ತರಲಿದ್ದಾರೆ. ಉತ್ಸವದ ವಿಶೇಷವೆಂದರೆ ವಿರಾಸತ್ ಪ್ರಶಸ್ತಿ. ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲನಾಥ್, ಮೋಹನವೀಣಾ ಕಲಾವಿದ ವಿಶ್ವಮೋಹನ್ ಭಟ್, ಡಾ.ಗೌತಮ್ ಕಾರ್ತಿಕ್, ಡ್ರಮ್ ವಾದಕ ಶಿವಮಣಿ, ರುದ್ರೇಶ್ ಮಹಂತಪ್ಪ, ಎ.ಕೆ.ಪಲನಿವೇಲು, ವಿ.ಸೆಲ್ವಾ ಗಣೇಶ್ ಮತ್ತಿತರರು ವಿರಾಸತ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications