ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ! ಬೆಂಗಳೂರು ಅಭಿವೃದ್ಧಿ ಕೇಂದ್ರ ಜಾಗತಿಕ ನೇತಾರ

By Staff
|
Google Oneindia Kannada News

ಮುಂಬೈ, ಡಿ.18 : ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಸರ್ಚ್ ಇಂಜಿನ್ ಯಾಹೂನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಮಾಹಿತಿ ತಂತ್ರಜ್ಞಾನವನ್ನು ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿ ವಿತರಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಯಾಹೂದ ಹಿರಿಯ ಅಧಿಕಾರಿಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೇಂದ್ರವೊಂದರಲ್ಲೇ ಒಂದೂವರೆ ಸಾವಿರ ನುರಿತ ಸಾಫ್ಟ್‌ವೇರ್ ತಜ್ಞರು ಯಾಹೂ ಉತ್ಪನ್ನಗಳಿಗೆ ನಾವೀನ್ಯತೆ ನೀಡುವತ್ತ ಕಾರ್ಯನಿರತರಾಗಿದ್ದಾರೆ. ಒಂದೇ ಕೇಂದ್ರದಲ್ಲಿ ಇಷ್ಟೊಂದು ತಜ್ಞರು ಕೆಲಸ ಮಾಡುತ್ತಿರುವುದು ಜಾಗತಿಕ ಮುಂದಾಳತ್ವ ವಹಿಸುತ್ತಿರುವುದಕ್ಕೆ ಸಾಕ್ಷಿ ಎಂದು ಯಾಹೂ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಭಾಕರ್ ರಾಘವನ್ ಹೇಳಿದ್ದಾರೆ.

ಇಲ್ಲಿ ಹಮ್ಮಿಕೊಳ್ಳಲಾಗಿದ್ದ 'ಇನ್ಫೋವಿಷನ್ 2007' ವಿಚಾರ ಸಂಕಿರಣದಲ್ಲಿ ಭಾಗವಹಿಸಲು ರಾಘವನ್ ಆಗಮಿಸಿದ್ದರು.

ಜಾಗತಿಕ ಮಾರುಕಟ್ಟೆಗೆ ಇಂಟರ್‌ನೆಟ್ ಸೇವೆ, ತಾಂತ್ರಿಕ ಸಾಧನಗಳು ಮತ್ತು ಮಾರುಕಟ್ಟೆ ಪರಿಹಾರಗಳನ್ನು ಕೊಡಲು ಭಾರತ ಸೂಕ್ತ ವಾತಾವರಣವನ್ನು ಹೊಂದಿದೆ. ನಮ್ಮ ಅಭಿವೃದ್ಧಿ ಇಲ್ಲಿಯೇ ಮುಂದುವರಿಯುವುದು ಮಾತ್ರವಲ್ಲ ಇನ್ನೂ ಹೆಚ್ಚಿನ ವೇಗದಲ್ಲಿ ಮುನ್ನುಗ್ಗುವ ಎಲ್ಲಾ ಲಕ್ಷಣಗಳನ್ನು ತೋರಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಭಾರತದಲ್ಲಿ ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಪೂರಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಕೇಳಿದಾಗ, ಭಾರತ ಮತ್ತು ಚೀನಾಗಳಲ್ಲಿ ಅನೇಕ ಮೊಬೈಲ್ ಸಾಧನಗಳಿದ್ದರೂ ಹೆಚ್ಚಿನವು ಡಿಜಿಟಲ್ ಆಗಿಲ್ಲ ಮತ್ತು ಮಾಹಿತಿಯುಕ್ತ ದತ್ತವನ್ನು ಸಂವಹನಗೊಳಿಸುವಷ್ಟು ಸಶಕ್ತವಾಗಿಲ್ಲ ಎಂದು ವಿಶ್ಲೇಷಿಸಿದರು.

ಇನ್ನೂ ಉತ್ತಮ ಸೇವೆ ನೀಡುವ ಸಾಧನವನ್ನು ಕಂಡುಹಿಡಿಯುವುದೇ ನಮ್ಮ ಎದುರಿಗೆ ಸದ್ಯಕ್ಕಿರುವ ದೊಡ್ಡ ಸವಾಲು ಎಂದು ಅವರು ಹೇಳಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X