ಸಿಮೆಂಟ್ ದರ ಹೆಚ್ಚಳ : ಆರು ತಿಂಗಳು ಚಿಂತೆ ಬಿಟ್ಟು ಬಿಡಿ!

ನವದೆಹಲಿ, ಡಿ.18 : ಸಿಮೆಂಟ್ ದರಗಳು ಬರುವ ಆರು ತಿಂಗಳ ಕಾಲ ಸ್ಥಿರವಾಗಿರುತ್ತವೆಂದು ಸಿಮೆಂಟ್ ಕಂಪನಿಗಳ ಒಕ್ಕೂಟ ತಿಳಿಸಿದೆ. 'ಸಿಮೆಂಟ್‌ನ ಬೇಡಿಕೆಗೆ ತಕ್ಕ ಪೂರೈಕೆ ಇದೆ; ಏನೋ ಸಣ್ಣ ಸಣ್ಣ ಮಾರ್ಪಾಟುಗಳನ್ನು ಬಿಟ್ಟರೆ ಸಿಮೆಂಟ್ ಬೆಲೆಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ...' ಎಂದು ಸಿಮೆಂಟ್ ಉತ್ಪತ್ತಿದಾರರ ಕೂಟದ (ಸಿಎಂಎ) ಅಧ್ಯಕ್ಷರಾದ ಎಚ್.ಎಂ ಬಂಗೂರ್ ತಿಳಿಸಿದ್ದಾರೆ. ಸಂಸ್ಥೆಯ 62ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.

ಏಪ್ರಿಲ್-ನವೆಂಬರ್ ಮಧ್ಯಕಾಲದ ದರಗಳಲ್ಲಿ ಬೆಲೆ ಏರಿಕೆ ಶೇ.3ಕ್ಕಿಂತಲೂ ಕಡಿಮೆ ಇದೆ. ಸಾರಿಗೆ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಕಾರಣವಾಗಬಾರದು ಎಂದು ಕಂಪನಿಗಳು ಒಂದು ನಿರ್ಣಯಕ್ಕೆ ಬಂದಿವೆ. ಸಿಮೆಂಟ್ ಉತ್ಪಾದನೆ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಲು ನಾವು ಪ್ರಾಧಾನ್ಯತೆ ನೀಡುತ್ತಿದ್ದೇವೆಯೇ ಹೊರತು ಬೆಲೆ ಏರಿಕೆಗಲ್ಲ ಎಂದು ಅವರು ಹೇಳಿದ್ದಾರೆ.

ಸಿಮೆಂಟ್ ಉತ್ಪತ್ತಿಗೆ ಅವಶ್ಯಕವಾಗಿ ಬೇಕಾದ ಕಲ್ಲಿದ್ದಲಿನ ಬೆಲೆ ಶೇ.26ರಷ್ಟು ಏರಿಕೆಯಾಗಿದೆ. ಇದರಲ್ಲಿ ಸಾರಿಗೆ ವೆಚ್ಚವೂ ಸೇರಿದೆ. ಕಚ್ಚಾವಸ್ತುಗಳ ಬೆಲೆಯೂ ಅಧಿಕವಾಗಿದೆ. ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಅಧಿಕವಾಗುವುದಕ್ಕೂ ಸಿಮೆಂಟ್ ಪ್ರಿಯವಾಗಲು ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಸಿಮೆಂಟ್ ಬೆಲೆ ಮತ್ತೂ ಹೆಚ್ಚಾಗಿದ್ದು ಮೂಟೆಯೊಂದಕ್ಕೆ ರೂ.260ರವರೆಗೂ ಇದೆ. ಆದರೆ ದೇಶದಲ್ಲಿ ಸಿಮೆಂಟ್ ಕೊರತೆ ಇಲ್ಲವೆಂದೂ, ನಿರ್ಮಾಣಕ್ಕೆ ಅವಶ್ಯಕವಾದ ಸಿಮೆಂಟನ್ನು ಉದ್ಯಮ ಪೂರೈಸುತ್ತಿದೆ ಎಂದು ಬಂಗೂರ್ ತಿಳಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+